ದಿನದ ಸುದ್ದಿ

ತಮ್ಮ ಸ್ವಂತ ಹಣದಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಿ ದಾವಣಗೆರೆ ಜನತೆಯ ಋಣ ತೀರಿಸಿ : ಶಶಿಧರ್ ಪಾಟೀಲ್

Published

on

ಸುದ್ದಿದಿನ, ದಾವಣಗೆರೆ : ಪದೇ ಪದೇ ಪೆಟ್ರೋಲ್ ಬಗ್ಗೆ ಕೇಳಿ ನನ್ನ ಹೇಳಿಕೆ ವೈರಲ್ ಆಗುವಂತೆ ಮಾಡಬೇಡಿ ಎಂಬ ನಿಮ್ಮ ಹೇಳಿಕೆ ಸಾರ್ವಜನಿಕರ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತದೆ ಎಂದು ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರೇ ನಿಮಗೆ ಸಾರ್ವಜನಿಕರ ಮತ್ತು ರೈತರ ಬಗ್ಗೆ ಕಾಳಜಿಯಿದ್ದರೆ ಕೇಂದ್ರ ಸಚಿವರ ಬಳಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲು ಮನವಿ ಮಾಡಿ ಅದನ್ನು ಬಿಟ್ಟು ನಿಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವ ಕೆಲಸ ಮಾಡಬೇಡಿ.

ನಿಮಗೆ ನಿಜವಾಗಲೂ ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದ್ದರೆ ನೀವು ಇಂದು ನೀಡಿರುವ ಹೇಳಿಕೆಗೆ ಬದ್ಧರಾಗಿ ದಾವಣಗೆರೆ ಜನತೆಗೆ ಉಚಿತ ಪೆಟ್ರೋಲ್ ಮತ್ತು ಡೀಸೆಲ್ ನೀಡಿ ಜಿಲ್ಲೆಯ ಜನರ ಋಣ ತೀರಿಸಿ ಎಂದು ಆಗ್ರಹಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version