ಕ್ರೀಡೆ

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ : ಕಂದಗಲ್ಲು ಸರ್ಕಾರಿ ಶಾಲೆಯ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ

Published

on

ಸುದ್ದಿದಿನ, ದಾವಣಗೆರೆ : ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಂದಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ.

ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಕಲ್ಪನಾ ಮತ್ತು ತಂಡ ಪ್ರಥಮ, ಬಾಲಕಿಯರ ಥ್ರೋಬಾಲ್ ವಿಭಾಗದಲ್ಲಿ ಕೋಮಲ ಮತ್ತು ತಂಡ ಪ್ರಥಮ, ಬಾಲಕಿಯರ ವಿಭಾಗದ 100 ಮೀಟರ್, 200 ಮೀಟರ್, ಮತ್ತು 400 ಮೀಟರ್ ವಿಭಾಗದಲ್ಲಿ ಕೋಮಲ ಪ್ರಥಮ, ರಿಲೇ 4* 100 ವಿಭಾಗದಲ್ಲಿ ನಿಖಿತಾ ಮತ್ತು ತಂಡ ತೃತೀಯ, ಗುಂಡು ಎಸೆತ ವಿಭಾಗದಲ್ಲಿ ಕಲ್ಪನಾ ತೃತೀಯ, ತಟ್ಟೆ ಎಸೆತ ವಿಭಾಗದಲ್ಲಿ ಕೋಮಲ ಪ್ರಥಮ. ಬಾಲಕರ 200 ಮೀಟರ್ ಓಟದ ವಿಭಾಗದಲ್ಲಿ ಮಾರುತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಸರ್ಕಾರಿ ಶಾಲಾ ಮಕ್ಕಳ ಈ ಸಾಧನೆಗೆ ಶಾಲಾ ಶಿಕ್ಷಕ ಸಿಬ್ಬಂದಿ, ಎಸ್.ಡಿ.ಎಂ.ಸಿ ಸಿಬ್ಬಂದಿ, ಕಂದಗಲ್ಲು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಪೋಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version