ಕ್ರೀಡೆ

ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಕ್ರೀಡಾಶಾಲೆ-ಕ್ರೀಡಾ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ

Published

on

ಸುದ್ದಿದಿನ,ದಾವಣಗೆರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2019-20ನೇ ಸಾಲಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ವಿವಿಧ ಹಂತಗಳಲ್ಲಿ ಕ್ರೀಡಾಶಾಲೆ/ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ದಾವಣಗೆರೆ ಕ್ರೀಡಾ ಶಾಲೆಗೆ ಆಯ್ಕೆಗೊಳ್ಳಲು ಕಿರಿಯರ ವಿಭಾಗದಲ್ಲಿ ಕಬಡ್ಡಿ-ಬಾಲಕರು, ಕುಸ್ತಿ-ಬಾಲಕರು, ಅಥ್ಲೆಟಿಕ್-ಬಾಲಕರು ಪಾಲ್ಗೊಳ್ಳಬಹುದಾಗಿದ್ದು 2020 ರ ಜೂನ್ 01 ಕ್ಕೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.

ಖೋ-ಖೊ-ಬಾಲಕರು 2020 ರ ಜೂನ್ 01 ಕ್ಕೆ 12 ವರ್ಷ ಮೀರಿರಬಾರದು ಮತ್ತು 6ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.

ಕಿರಿಯರ ವಿಭಾಗ (ಮೊದಲನೆ ಹಂತ)

ಕ್ರೀಡೆಗಳು: ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್‍ಬಾಲ್, ಫುಟ್‍ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್, ಈಜು(ಬಾಲಕ/ಬಾಲಕಿಯರು), ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಈ ವಿಭಾಗದಲ್ಲಿ ಪ್ರವೇಶ ಬಯಸುವ ಕ್ರೀಡಾಪಟುಗಳು 2020 ರ ಜೂನ್ 01 ಕ್ಕೆ 14 ವರ್ಷ ಮೀರಿರಬಾರದು ಮತ್ತು 8ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.

ಹಿರಿಯರ ವಿಭಾಗ : ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್‍ಬಾಲ್, ಫುಟ್‍ಬಾಲ್,ವಾಲಿಬಾಲ್, ಜಿಮ್ನಾಸ್ಟಿಕ್ (ಬಾಲಕ/ಬಾಲಕಿಯರು), ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಈ ವಿಭಾಗದಲ್ಲಿ ಪ್ರವೇಶ ಬಯಸುವ ಬಾಲಕ/ಬಾಲಕಿಯರು 2020 ರ ಜೂನ್ 01 ಕ್ಕೆ 19 ವರ್ಷ ಮೀರಿರಬಾರದು ಮತ್ತು ಪ್ರಥಮ ಪಿ.ಯು.ಸಿ ಗೆ ಸೇರಲು ಅರ್ಹತೆ ಹೊಂದಿರಬೇಕು. ಜನ್ಮ ದಿನಾಂಕ ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು.

ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಆಯ್ಕೆ ನಡೆಯುವ ಸ್ಥಳ ಮತ್ತು ದಿನಾಂಕ ವಿವರ

ಡಿ.27 ರಂದು ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮ ಮತ್ತು ಡಿ.28 ರಂದು ತಾಲ್ಲೂಕು ಕ್ರೀಡಾಂಗಣ, ಜಗಳೂರು ಮೊ.ಸಂ: 7019565606. ಡಿ.30 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ನ್ಯಾಮತಿ ಮೊ.ಸಂ: 9448977066, ಡಿ.31 ರಂದು ತಾಲ್ಲೂಕು ಕ್ರೀಡಾಂಗಣ ಹೊನ್ನಾಳಿ ದೂ.ಸಂ: 8762435467. ಡಿ.30 ಸರ್ಕಾರಿ ಪದವಿಪೂರ್ವ ಕಾಲೇಜು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಮೊ.ಸಂ: 9741839790. ಡಿ.31 ರಂದು ತಾಲ್ಲೂಕು ಕ್ರೀಡಾಂಗಣ ಚನ್ನಗಿರಿ ಮೊ.ಸಂ: 9480796263. 2020 ರ ಜನವರಿ 02 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಹರಿಹರ ತಾಲ್ಲೂಕು ಕುಂಬಳೂರು ಗ್ರಾಮ ಮತ್ತು 2020 ರ ಜನವರಿ 03 ರಂದು ತಾಲ್ಲೂಕು ಕ್ರೀಡಾಂಗಣ ಹರಿಹರ ಮೊ.ಸಂ: 94486 67255.

2020 ರ ಜನವರಿ 06 ರಂದು ಶ್ರೀಹ್ಯಾಳ್ಯಾದ ವೀರಪ್ಪ ಶಿವಲಿಂಗಪ್ಪ ಸಂಯುಕ್ತ ಪದವಿಪೂರ್ವ ವಿದ್ಯಾಲಯ ದಾವಣಗೆರೆ ತಾಲ್ಲೂಕು ಅಣಜಿ ಮೊ.ಸಂ: 9448667255. 2020 ರ ಜನವರಿ 08 ರಂದು ಜಿಲ್ಲಾ ಕ್ರೀಡಾಂಗಣ ದಾವಣಗೆರೆ ದೂ.ಸಂ: 08192-237480 ನ್ನು ಸಂಪರ್ಕಿಸಬಹುದು. ಜಿಲ್ಲಾ ಮಟ್ಟದ ಆಯ್ಕೆಯು 2020 ರ ಜನವರಿ 08 ರಂದು ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480 ಇಲ್ಲಿ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲ್ಲೂಕಿನ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಕಚೇರಿ ದೂ.ಸಂ: 08192-237480 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version