ದಿನದ ಸುದ್ದಿ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ : 207 ಕ್ಕೆ ಏರಿದ ಮೃತರ ಸಂಖ್ಯೆ

Published

on

ಸುದ್ದಿದಿನ, ಕೊಲಂಬೊ : ಶ್ರೀಲಂಕಾದ ಕೊಲಂಬೊದಲ್ಲಿ 8ಕಡೆ ಸರಣಿ ಬಾಂಬ್ ಸ್ಫೋಟದಲ್ಲಿ 207 ಜನರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈಸ್ಟರ್ ಹಬ್ಬದ ಆಚರಣೆ ವೇಳೆ ಉಗ್ರರ ಅಟ್ಟಹಾಸ ಮೆರೆದಿದ್ದು, ಕೊಲಂಬೊದಲ್ಲಿರುವ ಸೇಂಟ್ ಆಂಥೋನಿ ಚರ್ಚ್​ ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ಮಾಡಿದ್ದಾರೆ.

ಈ‌ ಹಿನ್ನೆಲೆಯಲ್ಲಿ ಕೊಲಂಬೋ ದಲ್ಲಿ ಕರ್ಫ್ಯೂ ಜಾರಿ ಮಾಡಿಲಾಗಿದೆ. ದಾಳಿಯಲ್ಲಿ ಸುಮಾರು 450 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆತ್ಮಾಹುತಿ ಬಾಂಬ್ ದಾಳಿಗೆ 3 ಪೊಲೀಸ್ ಆಫೀಸರ್ಸ್ ಬಲಿಯಾಗಿದ್ದಾರೆ‌.

ಚರ್ಚ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ದಾಳಿ ಖಂಡನೀಯ ಎಂದಿದ್ದಾರೆ ಬ್ರಿಟನ್ ಪ್ರಧಾನಿ ತೆರೆಸಾ. ಹಾಗೇ ಮೇ ಶ್ರೀಲಂಕಾ ದಾಳಿ ತುಂಬಾ ಕ್ರೂರವಾದದು ಎಂದಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು, ಜಾಗತಿಕ ಉಗ್ರವಾದದ ವಿರುದ್ಧ ಹೋರಾಡುವಂತೆ ಕರೆ ನೀಡಿದ್ದಾರೆ.

ಚರ್ಚ್ ಒಂದರಲ್ಲೇ 50 ಜನರು ಬಲಿಯಾಗಿದ್ದು,
ಕೊಲಂಬಿಯಾ ನ್ಯಾಷನಲ್ ಆಸ್ಪತ್ರೆ ಯಲ್ಲಿ 300 ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.‌ ಈ ಘಟನೆ ಬಗ್ಗೆ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು,ಕೊಲಂಬೋದಲ್ಲಿರುವ ಭಾರತೀಯ ಹೈ ಕಮಿಷನರ್ ಜೊತೆ ನಾವು ನಿರಂತರ ಸಂಪರ್ಕ ದಲ್ಲಿದ್ದೇವೆ ಸಧ್ಯದ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

7 ಶಂಕಿತರ ಬಂಧನ

ಈ ಸರಣಿ ಸ್ಪೋಟಕ್ಕೆ ಸಂಬಂಧಿಸಿದ 7 ಶಂಕಿತರನ್ನು ಬಂಧಿಸಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕಾ ರಕ್ಷಣಾ ಸಚಿವ ರುವನ್ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version