ದಿನದ ಸುದ್ದಿ
ಹಮಾಲಿ ಮಾಡುತ್ತಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಲಿತ ಯುವಕ ಫಸ್ಟ್ : ಪ್ರತಿಭೆ ಗುರುತಿಸಿ ಸಹಾಯ ಮಾಡಿದ್ರು ಸಿರಾಜ್ ಅಹಮದ್..!
ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಸಂತೇಬೆನ್ನೂರು ಗ್ರಾಮದ ಮಾರುತಿ ಎಂಬ ದಲಿತ ಯುವಕ ಸಂತೇಬೆನ್ನೂರು ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಬಸ್ಸ್ ಸ್ಟಾಂಡ್ ನಲ್ಲಿ ಮತ್ತು ದಾವಣಗೆರೆಗೆ ರೇಷನ್ ತರುವ ಅಪೇ ಗಾಡಿಗಳಲ್ಲಿ ಹಮಾಲಿ ಕೂಲಿ ಮಾಡುತ್ತಲೇ ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗ್ರಾಮಸ್ಥರಿಗೆ ಶಿಕ್ಷರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ.
ಹನುಮಂತಪ್ಪ ಸುಧಾ ದಂಪತಿಗಳ ಮಗ ಮಾರುತಿ.ಇವರ ತಂದೆ ತಾಯಿ ಮಣ್ಣಿನ ಕೂಲಿ ಕೆಲಸ ಮಾಡುತ್ತಿರುತ್ತಾರೆ.ತಂದೆ ತಾಯಿಗಳು ಕೂಲಿ ಕೆಲಸ ಮಾಡುವುದನ್ನು ಕಂಡು ಇವನು ಸಹ ಹಮಾಲಿ ಮಾಡಿ ತಂದೆ ತಾಯಿಗಳನ್ನು ಸಾಕುತ್ತಾ ಜೊತೆಗೆ ಚೆನ್ನಾಗಿ ವಿಧ್ಯಾಬ್ಯಾಸ ಮಾಡಬೇಕೆಂದು ಶಾಲೆಯ ಶಿಕ್ಷಕರ ಮಾರ್ಗದರ್ಶನದೊಂದಿಗೆ ಪಬ್ಲಿಕ್ ಶಾಲೆಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ಇವನು ಕಷ್ಠಪಟ್ಟು ಓದಿ ಶಾಲೆಗೆ ಫಸ್ಟ್ ಬಂದಿರುವುದನ್ನು ಕಂಡ ಗ್ರಾಮದ ಮುಖಂಡರು ಹಾಗೂ ವರ್ತಕರು ಆದ ಕೆ.ಸಿರಾಜ್ ಅಹಮದ್ ರವರು ಇವನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಹಣ ಸಹಾಯ ಮಾಡಿ ನೊಂದ ಬಡ ದಲಿತ ಕುಟುಂಬಕ್ಕೆ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಕ್ಲಸ್ಟರ್ ಆದ ಶ್ರೀಮತಿ ಕುಸುಮ ಶಿಕ್ಷಕಿಯರಾದ ಶ್ರೀಮತಿ ಸುನಿತ , ರಾಜಮ್ಮ ಶಿಕ್ಷಕರು ಹಾಗೂ ಕ,ಸಾ,ಪ ಕಾರ್ಯದರ್ಶಿಯಾದ ಎಂಬಿ ನಾಗರಾಜ್ ಕಾಕನೂರು ಇವರು ಶಾಲು ಹೊದಿಸಿ ಸನ್ಮಾನಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243