ದಿನದ ಸುದ್ದಿ
ಎಸ್ ಎಸ್ ಎಲ್ ಸಿ ಫಲಿತಾಂಶ | ತ್ಯಾವಣಿಗೆ ‘ಪ್ರಕೃತಿ ವಿದ್ಯಾಲಯ’ದ ರಕ್ಷಿತಾಗೆ ಶೇ. 98 ಅಂಕ..!
ಸುದ್ದಿದಿನ,ದಾವಣಗೆರೆ : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಗ್ರಾಮದ ಪ್ರಕೃತಿ ವಿದ್ಯಾಲಯದ ರಕ್ಷಿತಾ ಜಿ. ಡಿ 616 ಅಂಕಗಳೊಂದಿಗೆ ಶೇ. 98.56 ಹಾಗೂ ಪೂಜಾ ಬಿ. ಎಸ್ 604 ಅಂಕಗಳೊಂದಿಗೆ ಶೇ. 96.64 ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಅವರ ಮುಂದಿನ ವಿದ್ಯಾಭ್ಯಾಸವು ಸಹ ಉಜ್ವಲವಾಗಲಿ ಎಂದು ಅವರಿಗೆ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಶುಭ ಕೋರಿದ್ದಾರೆ. ಅಂತೆಯೇ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಶುಭಾಶಯಗಳನ್ನು ಕೋರಲಾಗಿದೆ ಎಂದು ವಿದ್ಯಾಲಯದ ಕಾರ್ಯದರ್ಶಿ ಕೆ. ಜಿ. ಲೋಹಿತ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಕೆ. ಜಿ. ಲೋಹಿತ್ ಕುಮಾರ್ ಅವರ ಮೊ. ಸಂ : 89707 03334 ಅಥವಾ 8088113334 ಗೆ ಕರೆ ಮಾಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243