ದಿನದ ಸುದ್ದಿ
ಎಸ್ ಎಸ್ ಎಲ್ ಸಿ | ಮರು ಮೌಲ್ಯ ಮಾಪನ ; ರಾಜ ರಾಜೇಶ್ವರಿ ಶಾಲೆಯ ಭೂಮಿಕಾಳಿಗೆ 600 ಅಂಕ
ಸುದ್ದಿದಿನ ಡೆಸ್ಕ್ : ಮೇ ತಿಂಗಳಲ್ಲಿ ಪ್ರಕಟಗೊಂಡ 2021 – 22 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 599 ಅಂಕ ಗಳಿಸಿದ್ದ ವಿದ್ಯಾರ್ಥಿನಿ ಭೂಮಿಕಾ ಕೆ ಜಿ ಗೆ ಮರು ಮೌಲ್ಯ ಮಾಪನದಲ್ಲಿ ಹೆಚ್ಚುವರಿ ಒಂದು ಅಂಕ ಲಭಿಸುವ ಮೂಲಕ ಒಟ್ಟು ಅಂಕ 600 ಕ್ಕೆ ಏರಿದೆ.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಪ್ರತಿಶತ ಫಲಿತಾಂಶ ಪಡೆದಿರುವ ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಭೂಮಿಕಾ ಕನ್ನಡ ವಿಷಯದಲ್ಲಿ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದಳು.
ಇದೀಗ ಮರು ಮೌಲ್ಯ ಮಾಪನದ ಫಲಿತಾಂಶ ದೊರೆತಿದ್ದು, ಹೆಚ್ಚುವರಿ ಒಂದು ಅಂಕ ಗಳಿಸುವ ಮೂಲಕ ಶಾಲೆಯ 600 ಕ್ಕೂ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಾಲಿಗೆ ಸೇರ್ಪಡೆ ಆಗಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರಾದ ಎಸ್ ಶಶಿಧರ್, ಸಂಸ್ಥೆಯ ಕಾರ್ಯದರ್ಶಿ ಜಿ.ಬಿ ಶಿವಾನಂದಪ್ಪ, ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಶಿಕ್ಷಕರು, ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಅಭಿನಂದಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243