ದಿನದ ಸುದ್ದಿ
ಎಸ್ ಎಸ್ ಎಲ್ ಸಿ ಫಲಿತಾಂಶ ; ಚಂದನ.ಎನ್ ಶಾಲೆಗೆ ಪ್ರಥಮ
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಮೆಳ್ಳೆಕಟ್ಟೆ ಸರ್ಕಾರಿ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಚಂದನ ಎನ್. ಆಲೂರು, ಅವರು 625 ಕ್ಕೆ 576(92.16) ಅಂಕಗಳೊಂದಿಗೆ ಇಡೀ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಬಡತನದಲ್ಲಿ ಜನಿಸಿದ ಚಂದನ ಎನ್. ರವರು ಶಿಸ್ತು, ಶ್ರದ್ದೆ, ಪರಿಶ್ರಮದಿಂದ ಓದಿ ಶಾಲೆಗೆ, ತನ್ನ ಊರಿಗೆ. ಮತ್ತು ತಂದೆ ತಾಯಿಗೆ ಕೀರ್ತಿಯನ್ನು ತಂದಿದ್ದಾರೆ. ಆಕೆ ತಂದೆ ತಾಯಿ ಮತ್ತು ಊರಿನ ಜನ ಶುಭಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243