ದಿನದ ಸುದ್ದಿ
ಮೇ 19 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ : ಸಚಿವ ಬಿ.ಸಿ.ನಾಗೇಶ್
ಸುದ್ದಿದಿನ ಡೆಸ್ಕ್ : ರಾಜ್ಯಾದ್ಯಂತ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇದೇ 19ರಂದು ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಎಸ್.ಎಸ್.ಎಲ್.ಸಿ ಮಂಡಳಿಯಲ್ಲಿ ಮಧ್ಯಾಹ್ನದ ನಂತರ ಫಲಿತಾಂಶವನ್ನು ಪ್ರಕಟಿಸಲಾಗುವುದು. ಅಂತರ್ಜಾಲದಲ್ಲಿ ಫಲಿತಾಂಶ ಬೆಳಿಗ್ಗೆ ಬಿತ್ತರಿಸಲಾಗುವುದು. ಅಂತರ್ಜಾಲದ ವಿಳಾಸ www.sslcresults.gov.in ನಲ್ಲಿ ನೋಡಬಹುದು ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243