ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇಕಡ 85.63 ರಷ್ಟು ತೇರ್ಗಡೆ; ಬಾಲಕಿಯರದೇ ಮೇಲುಗೈ

Published

on

ಸುದ್ದಿದಿನ ಡೆಸ್ಕ್ : 2021-2022ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಶೇಕಡ 85.63ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದೇ ಮೇಲುಗೈ.ಬೆಂಗಳೂರಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶದ ವಿವರ ನೀಡಿದರು.

8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರ ಪೈಕಿ 7 ಲಕ್ಷದ 30ಸಾವಿರದ 881ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದರು. ಶೇಕಡ 92.44ಬಾಲಕಿಯರು, ಶೇಕಡ 86.34ರಷ್ಟು ಬಾಲಕರ ಫಲಿತಾಂಶ ಪ್ರಕಟವಾಗಿದೆ. 145ವಿದ್ಯಾರ್ಥಿಗಳು ಗರಿಷ್ಠ 625ಅಂಕಗಳನ್ನು, 309 ಅಭ್ಯರ್ಥಿಗಳು 624ಅಂಕಗಳನ್ನು, 472 ವಿದ್ಯಾರ್ಥಿಗಳು 623, 615ವಿದ್ಯಾರ್ಥಿಗಳು 622ಅಂಕ ಪಡೆದು ತೇರ್ಗಡೆಯಾಗಿದ್ದಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version