ದಿನದ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ: ಫಾರೀಹ ತಬಸುಮ್ ಎಲ್ ಶಾಲೆಗೆ ಪ್ರಥಮ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ನವಿಲೇಹಾಳು ಗ್ರಾಮದ ನಿವಾಸಿಯಾದ ಲಿಯಾಕತ್ ಅಲಿ ಮತ್ತು ಕೌಸರ್ ಬಾನು. ದಂಪತಿಯ ಪುತ್ರಿ ಫಾರೀಹಾ ತಬಸುಮ್ ಎಲ್. ಅವರ ಎಸ್‌ ಎಸ್‌ ಎಲ್ ಸಿ ಸಾಧನೆಯು ಗಮನ ಸೆಳೆದಿದೆ.

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ 592 (94.72%) ಅಂಕಗಳನ್ನು ಗಳಿಸುವ ಮೂಲಕ ಕೆರೆಬಿಳಚಿಯ ಅಲ್ಪ ಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಫಾರೀಹಾ ತಬಸುಮ್ ಅವರು ಕನ್ನಡದಲ್ಲಿ 125/120, ಇಂಗ್ಲೀಷ್ ವಿಷಯದಲ್ಲಿ 100/100 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯ ಜೊತೆಗೆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದ್ದಾರೆ.

ಮಗಳ ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡುವ ಮೂಲಕ ತರಬೇತಿ ನೀಡಿದ ಕೆರೆಬಿಳಚಿಯ ಅಲ್ಪ ಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿರೇಶ್, ಕನ್ನಡ ಶಿಕ್ಷಕರಾದ ಅಮೃತ್ ಕೆ ಪಿ.
ಉರ್ದು ಶಿಕ್ಷಕರಾದ ಅಸಾದುಲ್ಲಾ ಖಾನ್., ಹಿಂದಿ ಶಿಕ್ಷಕರಾದ ಮಾರುತಿ ನಾಯಕ್., ವಿಜ್ಞಾನ ಶಿಕ್ಷಕರಾದ ಪರ್ವಿಜಾ಼ ಜಹಾನುಮ., ಸಮಾಜ ಶಿಕ್ಷಕರಾದ ರಂಜಿತ್., ಇಂಗ್ಲೀಷ್ ಶಿಕ್ಷಕರಾದ ವಿಶ್ವನಾಥ್., ಕಂಪ್ಯೂಟರ್ ಶಿಕ್ಷಕರಾದ ಮಂಜುನಾಥ್., ದೈಹಿಕ ಶಿಕ್ಷಕರಾದ ಮಮತ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಶಿಸ್ತು, ಶ್ರದ್ದೆ, ಪರಿಶ್ರಮದಿಂದ ಓದಿ ಶಾಲೆಗೆ, ತನ್ನ ಊರಿಗೆ. ಗುರುಗಳಿಗೆ ಮತ್ತು ತಂದೆ ತಾಯಿಗೆ ಕೀರ್ತಿಯನ್ನು ತಂದಿದ್ದಾರೆ. ಪೋಷಕರು. ಶಾಲೆಯ ಶಿಕ್ಷಕ ವೃಂದದವರು ಮತ್ತು ಊರಿನ ಜನ ಶುಭ ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version