ಸಿನಿ ಸುದ್ದಿ
Sandalwood ನಲ್ಲಿ Star war..!
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಅನ್ನೋ ಕೋಲ್ಡ್ ವಾರ್ ಮತ್ತೆ ಬ್ಲಾಸ್ಟ್ ಆಗಿದೆ.ಅದ್ರೆ ಈಬಾರಿ ಸ್ಟಾರ್ ವಾರ್ ಶುರು ಆಗಿರೋದು ಬೆಳ್ಳಿ ತೆರೆಯ ಸೂಪರ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ಹಾಗೂ ಕಿರುತೆರೆ ಸೂಪರ್ ಸ್ಟಾರ್ ಜೆಕೆ ಫ್ಯಾನ್ಸ್ ಗಳ ನಡುವೆ. ಕಳೆದ ವಾರ ರಿಲೀಸ್ ಆದ ಜೆಕೆ ಆಭಿನಯದ ಮೇ ೧ ಚಿತ್ರದಲ್ಲಿ ಜೆಕೆ ಫ್ಯಾನ್ಸ್ಗಳು ಸೂಪರ್ ಸ್ಟಾರ್ ಪದವನ್ನು ಜೆಕೆ ಗೆ .ಬಳಸಿದ್ದಾರೆ.
ಇದ್ರಿಂದ ರೊಚ್ಚಿಗೆದ್ದಿರೋ ಉಪ್ಪಿ ಫ್ಯಾನ್ಸ್ ಜೆಕೆ ಅಭಿಮಾನಿಗಳ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ತೊಡೆತಟ್ಟಿದ್ದಾರೆ.ಅದ್ರೆ ಈ ವಿಷ್ಯಕ್ಕೆ ಸ್ಯಾಂಡಲ್ ವುಡ್ ನ ಬುದ್ದಿವಂತ ಮಾತ್ರ ರಿಯಾಕ್ಟ್ ಮಾಡಿಲ್ಲ.ಅದ್ರೆ ಅಭಿಮಾನಿ ದೆವರುಗಳು ತಿಳ್ಕೋ ಬೇಕಾದ ಸತ್ಯ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಅಗಾಗ ಸದ್ದು ಮಾಡೋ ಈ ಸ್ಟಾರ್ ವಾರ್ ನಿಜಕ್ಕೂ ಸ್ಟಾರ್ ವಾರ್ ಅಲ್ಲ. ಯಾಕಂದ್ರೆ ಯಾವುದೇ ಸ್ಟಾರ್ ಗಳು ಬಾಕ್ಸ್ ಅಫೀಸ್ ನಲ್ಲಿ ನಾನು ಬಾಸ್. ಚಂದನವನಕ್ಕೆ ನಾನೇ ಚಕ್ರವರ್ತಿ, ಸ್ಟಾರ್ ರೇಟಿಂಗ್ಸ್ ನಲ್ಲಿ ನಾನ್ ನಂ ೧ ಅಂತ ಹೇಳಿಲ್ಲ.ಅದಲ್ಲದೆ ಸ್ಟಾರ್ ಗಳ ಮಟ್ಟಿಗೆ ನಿಜಕ್ಕೂ ಸ್ಟಾರ್ ವಾರ್ ಇಲ್ಲ. ಇದಕ್ಕೆ ಪೂರಕ ವೆಂಬತೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚನ ನೇತೃತ್ವದಲ್ಲಿ ನಡೆದ ಕೆಸಿಸಿ ಕಪ್ ಸಾಕ್ಷಿ . ಸ್ಟಾರ್ ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾಂಡಲ್ ವುಡ್ ನಟರೆಲ್ಲರು ಒಂದು ಕುಟುಂಬದ ರೀತಿ ಇದ್ರು. ಅದ್ರೆ ಇಲ್ಲಿ ಕಾಡುತ್ತಿರೋ ಪ್ರಶ್ನೆ ಅಂದ್ರೆ ಸ್ಯಾಂಡಲ್ ವುಡ್ ನ ಸ್ಟಾರ್ ವಾರ್ ಅನ್ನೋ ಫೈಯರ್ ಗೆ ಅಗಾಗ ತುಪ್ಪ ಸುರಿತಿರೋದು ಯಾರ್ ?ಎಸ್ ಇಲ್ಲಿ ಗಮನಿಸ ಬೇಕಾದ ಅಂಶ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ಸ್ಟಾರ್ ವಾರ್ ನಿಜಕ್ಕೂ ಸ್ಟಾರ್ ವಾರ್ ಅಲ್ಲ ಅದು ಫ್ಯಾನ್ಸ್ ಗಳ ವಾರ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಪ್ರತಿ ಭಾರಿ ಅಭಿಮಾನಿ ಹೆಸರಲ್ಲಿ ಯಾರೋ ಕಿಡಿಗೇಡಿಗಳು ನಟರ ಅಭಿಮಾನಿಗಳ ಹೆಸರಲ್ಲಿ ಸ್ಟಾರ್ ನಟರ ಫ್ಯಾನ್ಸ್ ಗಳ ಮಧ್ಯೆ ಬೆಂಕಿ ಹಚ್ಚಿ ಅವ್ರ ಮೈ ಬೆಚ್ಗೆ ಮಾಡ್ಕೋತಾರೆ .
ಅದ್ರೆ ಇದನ್ನು ತಿಳಿಯದ ಅಭಿಮಾನಿ ದೇವರುಗಳು ಕಾಳಗ ಮಾಡ್ತಾರೆ. ಯಾಕಂದ್ರೆ ನಿಜವಾದ ಅಭಿಮಾನಿ ಯಾವುದೇ ನಟನ ಹೆಸರಿನ ಮುಂದೆ ಇರುವ ಅವ್ರ ಬಿರುದಿಗೆ ಬೆಲೆ ಕೊಡಲ್ಲ ಅವ್ರ ನಟನೆಗೆ ಮನಸೋತು ಅಭಿಮಾನಿ ಆಗಿರ್ತಾನೇ.ಹೊರತು ಬಿರುದಿಗಲ್ಲ. ಯಾಕಂದ್ರೆ ಯಾವುದೇ ನಟ ಇಂಡಸ್ಟ್ರಿ ಗೆ ಎಂಟ್ರಿ ಕೊಡೊವಾಗ ಸ್ಟಾರ್ ಪಟ್ಟ ಅವ್ರ ಜೊತೆಇರಲ್ಲ. ಇದನ್ನ ತಿಳಿದಾದ್ರು ಫ್ಯಾನ್ಸ್ ಗಳು ಈ ಫ್ಯಾನ್ಸ್ ವಾರ್ ಗೆ ಪುಲ್ ಸ್ಟಾಪ್ ಇಟ್ಟು ವಾರ್ ಗೆ ಬೇರಾಗಿರುವ ಕಿಡಿಗೇಡಿಗಳಿಗೆ ಪಾಠ ಕಲ್ಸಿದ್ರೆ ಅಣ್ಣಾವ್ರು ಹೇಳಿದ ಅಭಿಮಾನಿಗಳೇ ದೇವರು ಎಂಬ ಮಾತಿಗೆ ನಿಜವಾದ ಅರ್ಥಸಿಗುತ್ತದೆ.
(-ಸತೀಶ್, ಪತ್ರಕರ್ತರು, ಬೆಂಗಳೂರು)