ದಿನದ ಸುದ್ದಿ
ರುಜುವಾನ್ ಕೆ ಗೆ ರಾಜ್ಯ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ದಾವಣಗೆರೆ ವಿಶ್ವವಿದ್ಯಾನಿಲಯದ ಸಂಶೋಧನಾ ವಿಧ್ಯಾರ್ಥಿ ರುಜುವಾನ್ ಕೆ ಇವರಿಗೆ ಸಾಧನ ಕೇರಿಯ ಸಾಧಕ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು.
ಧಾರವಾಡ ಜಿಲ್ಲೆಯ ಅಕ್ಷರ ದೀಪ ಪೌಂಡೇಶನ್. ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ-ಬೆಂಗಳೂರು. ಹಾಗೂ ಕರ್ನಾಟಕ ಸೋಶಿಯಲ್ ಕ್ಲಬ್ ಹುಬ್ಬಳ್ಳಿ, ಮತ್ತು ಗದಗವಾಣಿ ದಿನ ಪತ್ರಿಕೆ ಇವರ ಸಹಯೋಗದಲ್ಲಿ ಏ.15ರ ಶುಕ್ರವಾರ ನಡೆದ ವರಕವಿಗೊಂದು ಕಾವ್ಯ ನಮನ ಯುಗಾದಿ ಸಂಭ್ರಮ ಸಮಾರಂಭದಲ್ಲಿ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಧನ ಕೇರಿಯ ಸಾಧಕ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ರುಜುವಾನ್ ಕೆ ರವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಶ್ರೀ ಕಲಂದರ್ ಸಾಬ್ ಮತ್ತು ಶಂಷದ್ ಭೀ ದಂಪತಿಯ ಪುತ್ರರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243