ದಿನದ ಸುದ್ದಿ
ಅಡಿಕೆ ಮೇಲಿನ ಆಮದು ಸುಂಕ ಹೆಚ್ಚಿಸಲು ಕೇಂದ್ರಕ್ಕೆ ರಾಜ್ಯ ನಿಯೋಗ ಮನವಿ : ಆರಗ ಜ್ಞಾನೇಂದ್ರ
ಸುದ್ದಿದಿನ ಡೆಸ್ಕ್ : ಗೃಹ ಸಚಿವ ಆರಗ ಜ್ಞಾನೇಂದ್ರ ( Araga Jnanendra -Minister of Home Department ) ನೇತೃತ್ವದಲ್ಲಿನ ರಾಜ್ಯ ಅಡಿಕೆ ( Areca ) ಬೆಳೆಗಾರರ ಸಂಘದ ನಿಯೋಗ ಇಂದು ನವದೆಹಲಿಯಲ್ಲಿ ( New Delhi ) ಕೇಂದ್ರದ ಹಣಕಾಸು, ಕೃಷಿ ಮತ್ತು ವಾಣಿಜ್ಯ ಖಾತೆಯ ಸಚಿವರನ್ನು ( Finance Minister ) ಭೇಟಿ ಮಾಡಿ, ಆಮದಾಗುವ ( Export ) ಅಡಿಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಿತು.
ಅಡಿಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ | ಹೊದಿಗೆರೆ | ಶ್ರೀ ಮಧುಕೇಶ್ವರ ಪ್ರೌಢಶಾಲೆಯಲ್ಲಿ ದುಶ್ಚಟಗಳ ವಿರುದ್ಧ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಅಡಿಕೆ ಮೇಲಿನ ಜಿಎಸ್ ಟಿ ದರದ ಬಗ್ಗೆಯೂ ಕೇಂದ್ರ ಸಚಿವರ ಬಳಿ ಚರ್ಚಿಸಿ, ಮನವಿ ಸಲ್ಲಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಶಾಸಕ ಹರತಾಳು ಹಾಪ್ಪ ಮತ್ತಿತರರು ನಿಯೋಗದಲ್ಲಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243