ದಿನದ ಸುದ್ದಿ
ಸಂವಿಧಾನ ಬದಲಿಸುತ್ತೇವೆ ಹೇಳಿಕೆ | ಯತ್ನಾಳ್ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಿ : ಕಾಂಗ್ರೆಸ್ ಮುಖಂಡ ಶಿವು ಆಂದೋಲ
ಸುದ್ದಿದಿನ,ಶಹಾಪುರ: ಸಂವಿಧಾನ ಬದಲಾಯಿಸುವ ಮಾತುಗಳನ್ನಾಡಿರುವ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಕಾಂಗ್ರೇಸ್ ಯುವ ಮುಖಂಡ ಶಿವು ಆಂದೋಲಾ ಒತ್ತಾಯಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಬಿಜೆಪಿ ಪಕ್ಷ ಪ್ರಮುಖ ನಾಯಕರುಭಾರತ ದೇಶದ ಪವಿತ್ರ ಸಂವಿಧಾನ ವಿರುದ್ಧ ಹೇಳಿಕೆನೀಡುತ್ತಿರುವದು ಸರ್ವೆ ಸಾಮಾನ್ಯವಾಗಿದೆ. ಸಂವಿಧಾನನಾವು ಬದಲಾಯಿಸುತ್ತೇವೆ, ಸಂವಿಧಾನ ಬದಲಾಯಿಸಲುನಾವು ಅಧಿಕಾರಕ್ಕೆ ಬಂದಿರುವದು ಎಂದು ಮಾಜಿ ಕೇಂದ್ರಸಚಿವ ಅನಂತಕುಮಾರ ಹೆಗಡೆ ಹೇಳಿದ್ದರು.
ಈ ನಂತರಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ ಅಂಬೇಡ್ಕರ ರವರುಸಂವಿಧಾನ ಸರಿಯಾದ ಪ್ರಮಾಣದಲ್ಲಿ ರಚಿಸಿಲ್ಲ ಇದನ್ನುಬದಲಿಸಬೇಕು ಎಂಬ ಹೇಳಿಕೆಯನ್ನು ನೀಡಿದ್ದರು. ಇಷ್ಟೆಲ್ಲಾ ಹೇಳಿಕೆ ನೀಡಿದರು ಸಹ ಅಂತವರ ವಿರುದ್ಧ ಬಿಜೆಪಿವರಿಷ್ಠರು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ರೀತಿಯಬೆಳವಣಿಗೆಗಳನ್ನು ನೋಡಿದರೆ ಇದಕ್ಕೆ ಬಿಜೆಪಿಆಂತರಿಕವಾಗಿಹೇಳಿಕೆಗಳನ್ನು ಕೋಡಿಸುತ್ತಿದ್ದಾರೆಎಂದೆನಿಸುತ್ತಿದೆ. ಈ ರೀತಿಯ ಹೇಳಿಕೆ ನೀಡಿದರು ನರೇಂದ್ರಮೋದಿರವರು ಹೆಗಡೆ, ಗೋಮಧೂಸುಧನ ವಿರುದ್ಧ ಕ್ರಮಕೈಗೊಳ್ಳದಿರುವದು ಮೋದಿಗೆ ಈ ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂಬುದು ಎದ್ದು ಕಾಣುತ್ತಿದೆ.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳಇತ್ತೀಚೆಗೆಮೋದಿರವರು ಮತ್ತೆ ಪ್ರಧಾನಿಯಾದ್ರೆಈ ದೇಶದಸಂವಿಧಾನ ಬದಲಾವಣೆ ಮಾಡುತ್ತೆವೆಎಂಬ ಹೇಳಿಕೆಯನ್ನು ನೀಡಿರುವುದು ಖಂಡನೀಯ. ಈ ರೀತಿಯ ದೇಶದಸಂವಿಧಾನ ವಿರುದ್ಧ ಪದೆ ಪದೆ ಹೇಳಿಕೆ ನೀಡುತ್ತಿದ್ದರುಬಿಜೆಪಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.
ಈ ದೇಶದಸಂವಿಧಾನ ಇಡಿ ಜಗತ್ತಿನ
ಲ್ಲಿಯೇ ದೊಡ್ಡಸಂವಿಧಾನವಾಗಿದೆ. ಭಾರತ ದೇಶದ ಸಂವಿಧಾನ ಶ್ರೇಷ್ಟಸಂವಿಧಾನವಾಗಿದೆ. ಈ ದೇಶದ ಎಲ್ಲಾ ವರ್ಗದ ಜನನೆಮ್ಮದಿಯಿಂದ ಬದುಕುತ್ತಿದ್ದಾರೆ ಅದಕ್ಕೆ ಕಾರಣ ಭಾರತದಸಂವಿಧಾನ.
ಈ ದೇಶದ ಸಂವಿಧಾನದಿಂದಲ್ಲೆ ಇವತ್ತುಹಿಂದುಳಿದ ವರ್ಗದ ವ್ಯಕ್ತಿ ನರೇಂದ್ರ ಮೋದಿಪ್ರಧಾನಿಯಾಗಲು ಸಾಧ್ಯವಾಯಿತು. ನಾಗರಿಕರಿಗೆಸರಿಸಮಾನವಾದ ಹಕ್ಕುಗಳು, ಕಾನೂನು, ನ್ಯಾಯನೀಡುತ್ತಿರುವದು ಈ ದೇಶದ ಸಂವಿಧಾನ ಎಂದು ಅವರು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243