ದಿನದ ಸುದ್ದಿ
ಕಳುವಾಗಿದ್ದ ಬುದ್ಧನ ಪ್ರತಿಮೆ | ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬ್ರಿಟನ್ ಗಿಫ್ಟ್ ಆಗಿ ಕೊಡ್ತು..!
ಸುದ್ದಿದಿನ ಡೆಸ್ಕ್ | 12 ಶತಮಾನದ ಬುದ್ದನ ಪ್ರತಿಮೆಯೊಂದು ಇಲ್ಲಿಗೆ ಸರಿಯಾಗಿ 60 ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯಂದು ಕಾಣೆಯಾಗಿತ್ತು. ಅದನ್ನೀಗ ಬ್ರಿಟನ್ ಪೊಲೀಸರು ಮತ್ತೆ ಭಾರತಕ್ಕೆ ಹಿಂತಿರುಗಿಸಿದ್ದಾರೆ.
ಈ ಬುದ್ಧನ ಪ್ರತಿಮೆಯನ್ನು ಬಿಹಾರದ ನಳಂದ ವಸ್ತು ಸಂಗ್ರಹಾಲಯದಿಂದ ದುಷ್ಕರ್ಮಿಗಳು ಕದ್ದು ವಿದೇಶದಲ್ಲಿ ಕದ್ದು ಮಾರಾಟ ಮಾಡಿದ್ದರಂತೆ. ಕಂಚಿನ ಈ ಬುದ್ಧನ ಪ್ರತಿಮೆಯು 1961 ರಲ್ಲಿ ಬೆಳ್ಳಿಯ ಲೇಪನವಿರುವ ಹಾಗೂ ಕಂಚಿನ ಬುದ್ಧನ ಪ್ರತಿಮೆಯನ್ನೂ ಜೊತೆಗೆ ಕದ್ದಿದ್ದರು ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ನಳಂದ ವಸ್ತು ಸಂಗ್ರಹಾಲಯವು ಬ್ರಿಟನ್ ವಸ್ತುಸಂಗ್ರಹಾಲಯದ ಹರಾಜು ಮಾಡುವ ವೇಳೆ ತಮಗೆ ಕೊಡುವಂತೆ ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಕೊನೆಗೂ ಮನವಿಯನ್ನು ಆಲಿಸಿದ ಬ್ರಿಟನ್ ನ ಮೆಟ್ರೋಪಾಲಿಟನ್ ನಗರಸಭೆಯು ಸ್ವಾತಂತ್ಯ ದಿನಾಚರಣೆಯ ಅಂಗವಾಗಿ ಉಡಿಗೊರೆಯಾಗಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401