ದಿನದ ಸುದ್ದಿ
ಪ್ರಪಂಚದ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದವರು ಯಾರು ಗೊತ್ತಾ ?
ನವದೆಹಲಿ: ಗುಜರಾತ್ ನ ಸರ್ದಾರ್ ಸರೋವರ್ ಅಣೆಕಟ್ಟಿನ ಬಳಿ ಸ್ಥಾಪನೆಯಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 31 ರಂದು ಅನಾವರಣಗೊಳಿಸುವರು.
ಇದು ಪ್ರಪಂಚದ ಅತಿ ಎತ್ತರದ ಪ್ರತಿಮೆ ಎಂದು ಖ್ಯಾತಿ ಪಡೆದಿದ್ದು, ಏಕತಾ ಪ್ರತಿಮೆ ಎಂದು ಹೆಸರಿಸಲಾಗಿದೆ. ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಯವಾಗಿದೆ. ಮೊದಲ ಬಾರಿಗೆ ಕ್ರಾಫ್ಟ್ ಕಲೆ ಮೂಲಕ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ದೇಶ ಮತ್ತು ಜಗತ್ತಿನಲ್ಲಿ ಇದು ಮಾದರಿಯಾಗಿದೆ.
Read this: ಭಾರತ್ ಬಂದ್: ಕಾಂಗ್ರೆಸ್‍ಗೆ 20 ಪಕ್ಷಗಳ ಬೆಂಬಲ
ಈ ಪ್ರತಿಮೆ ನಿರ್ಮಿಸಿದ ಕುಶಲಕರ್ಮಿ ಹೆಸರು ರಾಮ್ ವಿ.ಸುತಾರ್. 92 ವರ್ಷದ ಇವರು ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂಲತಃ ಮಹಾರಾಷ್ಟ್ರದ ಗೆಂದೂರ್ ನಿವಾಸಿಯಾದ ವಾಸ್ತುಶಿಲ್ಪಿ ರಾಮ್ ವಿ.ಸುತಾರ್ ಅವರು ಸಂಸತ್ ಭವನದಲ್ಲಿ ನಿರ್ಮಾಣಗೊಂಡ ಮಾಹಾತ್ಮ ಗಾಂಧೀಜಿ ಪ್ರತಿಮೆ ಸೇರಿದಂತೆ ನೂರಾರು ಪ್ರತಿಮೆ ನಿರ್ಮಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.