ದಿನದ ಸುದ್ದಿ
ಕೀಲಿ ಹಾಕಿದ ಮನೆಗಳಲ್ಲಿ ಕಳವು | ಕಳ್ಳನ ಬಂಧನ
ಸುದ್ದಿದಿನ ಡೆಸ್ಕ್ : ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿ ಖದೀಮ ನಾಜಿಮ್ ಮುಲ್ಲಾ ಕಳ್ಳತನ ಮಾಡುತ್ತಿದ್ದ ವ್ಯಕ್ತಿ. ಬೆಳಗಾವಿಯ ಕ್ಯಾಂಪ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾರು ಇಲ್ಲದ ಮನೆಗಳ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ. ಈತನ ಮೇಲೆ ಮನೆಗಳ್ಳತನದ ಅನೇಕ ಪ್ರಕರಣಗಳಿವೆ.
4.50ಲಕ್ಷ ಮೌಲ್ಯದ 15ತೊಲ ಚಿನ್ನಾಭರಣ ಜಪ್ತಿ ಮಾಡಲಾಗಿದೆ.ಬಂಧಿತ ಆರೋಪಿಯ ವಿರುದ್ಧ
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು.