ದಿನದ ಸುದ್ದಿ
ಗ್ರಹಣ ಎಂದು ಬಾಗಿಲು ಹಾಕಿದ ಅಂಗಡಿಗಳಿಗೆ ಕನ್ನ
ಸುದ್ದಿದಿನ ಡೆಸ್ಕ್: ಮೈಸೂರಿನಲ್ಲಿ ಚಂದ್ರಗ್ರಹಣ ಕಾಲದಲ್ಲಿ ಕಳ್ಳರ ಕೈಚಳಕ ನಡೆದಿದೆ. ಗ್ರಹಣ ಕಾಲದಲ್ಲಿ ಜನ ಹೊರಗೆ ಬರಲ್ಲ ಎಂಬುದನ್ನು ಅರಿತ ಕಳ್ಳರು 8 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.
ಮೈಸೂರಿನ ಕನಕದಾಸ ನಗರದ ನೇತಾಜಿ ವೃತ್ತದ ಬಳಿ ಇರುವ ಅಂಗಡಿಗಳನ್ನ ಕಳ್ಳರು ದೋಚಿದ್ದಾರೆ.
ಮೆಡಿಕಲ್ ಸ್ಟೋರ್, ಸ್ಟೇಷನರಿ, ಪ್ರಾವಿಷನ್ ಸ್ಟೋರ್ ಗಳಲ್ಲಿ ಕಳ್ಳತನ ನಡೆದಿದೆ.
ಅಂಗಡಿಗಳ ರೋಲಿಂಗ್ ಶೆಟರ್ ಗಳನ್ನು ಮೀಟಿ ಭಾರೀ ಕಳ್ಳತನ ನಡೆದಿದ್ದು, ಕಿಲಾಡಿಗಳು ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಶೆಟರ್ ಗಳನ್ನು ಮೀಟಿ ತೆರೆಯಲು ಹೈಡ್ರಾಲಿಕ್ ಜಾಕ್ ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕುವೆಂಪು ನಗರ ಪೊಲೀಸರ ಭೇಟಿ, ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ನೋಡಿ: