ದಿನದ ಸುದ್ದಿ

ಹಿಂದಿ ದಿವಸ್ ವಿರೋಧಿಸಿ ಕನ್ನಡಗರ ಅಭಿಯಾನ; ಧ್ವನಿಗೂಡಿಸಿದ ಸ್ಟಾರ್ ನಟರು

Published

on

ಬೆಂಗಳೂರು: ಇಂದು ಹಿಂದಿ ದಿವಸ್ ಆಚರಿಸಲಾಗುತ್ತಿದ್ದು, ಇದನ್ನು ವಿರೋಧಿಸಿ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಡಾಲಿ ಧನಂಜಯ್, ಬಹುಭಾಷೆ ನಟ ಪ್ರಕಾಶ್ ರೈ, ನಟ ಚೇತನ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಹಲವು ವರ್ಷಗಳ ಹಿಂದೆಯೇ ಹೋರಾಟಗಳು ನಡೆದಿದ್ದವು. ಈಗ ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ಮೂಲಕ ಅಭಿಯಾನ ನಡೆಸಲಾಗುತ್ತಿದೆ. ಕನ್ನಡಪರ ಸಂಘಟನೆಗಳು, ಖ್ಯಾಸ ಸಾಹಿತಿಗಳು ಹಾಗೂ ಬರಗಾರರು ಕೂಡ ಅಭಿಯಾನಕ್ಕೆ ಸಾಥ್ ನೀಡಿದ್ದು, ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಕನ್ನಡನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ, ನಮಗೆ ಹಿಂದೆ ಭಾಷೆಯ ಅಗತ್ಯವಿಲ್ಲ ಎಂದು ಕನ್ನಡಗರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದಾರೆ.

Read This: ಸಂಚಾರಿ ಸಿಗ್ನಲ್ ವೃತ್ತಗಳಲ್ಲಿ ಬ್ಯಾನರ್‍ಗಳು ಮತ್ತು ಬಂಟಿಂಗ್ಸ್ ಗಳ ನಿಷೇಧ

ಸದ್ಯ ಟ್ವಿಟರ್ ನಲ್ಲಿ ಹ್ಯಾಶ್ ಟ್ಯಾಗ್ ರಚಿಸಿ ಅಭಿಯಾನ ರೂಪಿಸಲಾಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಸಾಥ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ “ಹಿಂದಿ ಗೊತ್ತಿಲ್ಲ ಹೋಗಯೋ, ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರಭಾಷೆ ಎಂಬ ಸಾಲುಗಳು ಕಾಣುತ್ತಿವೆ. ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version