ದಿನದ ಸುದ್ದಿ

‘ಡಾಕ್ಟರ್’ ಕನಸು ಕಂಡಿದ್ದಾಕೆ; ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ

Published

on

ಸುದ್ದಿದಿನ, ಕೋಲಾರ | ಜಿಲ್ಲೆಯ ಕೆಜಿಎಫ್ ಪಟ್ಟಣದ ಇಟಿ ಬ್ಲಾಕ್ ನ ಬಡಾವಣೆಯಲ್ಲಿ ಪಿಯುಸಿ ವಿದ್ಯಾರ್ಥಿ ,(17) ಸುಮಿತ್ರಾ ಪುಂಡರ Raging ದಾಳಿಗೆ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬಂಗಾರ ಪೇಟೆಯ ಎಸ್ ಡಿ ಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಈಕೆ ಡಾಕ್ಟರ್ ಆಗುವ ಕನಸು ಕಂಡಿದ್ದಳು. ಕಾಲೇಜಿನಲ್ಲಿ ಒಳ್ಳೆಯ ಹೆಸರನ್ನೂ ಗಳಿಸಿದ್ದಳು.

ಭಾನುವಾರ (ಆಗಸ್ಟ್ 12) ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಇಟಿ ಬ್ಲಾಕ್ ನ ತನ್ನ ಮನೆಗೆ ಬರುವಾಗ ಇದೇ ಬಡಾವಣೆಯ ಜೋಸೆಫ್ ಹಾಗೂ ಇತರ ನಾಲ್ಕು ಹುಡುಗರು ಈಕೆಯನ್ನ ಚುಡಾಯಿಸಿದ್ದು, ಸುಮಿತ್ರಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕೆಜಿಎಫ್ ನ ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜೋಸೆಫ್ ಹಾಗೂ ಇನ್ನಿತರ ಹುಡುಗರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡರಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version