ರಾಜಕೀಯ
ವಿಜಯ್ ಮಲ್ಯ ಪಲಾಯನಕ್ಕೆ ಅರುಣ್ ಜೇಟ್ಲಿ ಕಾರಣ: ಬಿಜೆಪಿ ನಾಯಕ ಪರೋಕ್ಷ ಟೀಕೆ
ಸುದ್ದಿದಿನ ಡೆಸ್ಕ್ : ಮದ್ಯದ ದೊರೆ ವಿಜಯ್ ಮಲ್ಯ ಅವರು ವಿದೇಶಕ್ಕೆ ಪಲಾಯನ ಮಾಡಲು ಹಣಕಾಸು ಸಚಿವ ಅರುಣ್ ಜೈಟ್ಲಿಯವರು ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯಮ್ ಸ್ವಾಮಿ ಪರೋಕ್ಷವಾಗಿ ಟೀಕಿಸಿದ್ದಾರೆ.
ವಿದೇಶಕ್ಕೆ ತೆರಳುವ ಮುನ್ನ ವಿಜಯ್ ಮಲ್ಯ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿರುವ ವಿಷಯ ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕ ಸುಬ್ರಮಣ್ಯಮ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ವಿಜಯ್ ಮಲ್ಯ ಒಟ್ಟು 54 ಲಗೇಜ್ ಹೊತ್ತು ವಿದೇಶಕ್ಕೆ ತೆರಳಿದ್ದಾರೆ. ಅ.24, 2015 ರಂದು ಅವರ ಬಂಧನ ವಾರೆಂಟ್ ತಿದ್ದಲಾಗಿದೆ ಎಂದು ಪರೋಕ್ಷವಾಗಿ ಜೇಟ್ಲಿ ಅವರತ್ತ ಬೊಟ್ಟು ಮಾಡಿದ್ದಾರೆ.