ದಿನದ ಸುದ್ದಿ

ಕಿಚ್ಚ ಸುದೀಪ್ ಜನ್ಮದಿನ: ಇಲ್ಲಿವೆ ನೋಡಿ ಅಪರೂಪದ ಚಿತ್ರಗಳು !

Published

on

ಸುದ್ದಿದಿನ ವಿಶೇಷ: ಕನ್ನಡದ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೆ.2ರ ಭಾನುವಾರ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದರು ಬರುತ್ತಿವೆ.

2000ರಲ್ಲಿ ತೆರೆಕಂಡ ಸ್ಪರ್ಶ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕನ್ನಡ ಚಿತ್ರಲೋಕ ಪ್ರವೇಶಿಸಿದ ಕಿಚ್ಚ ಸುದೀಪ್ ಇಂದು ರಾಷ್ಟ್ರಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

Read also: ಕಿಚ್ಚನ ಹುಟ್ಟುಹಬ್ಬಕ್ಕೆ ‘ಕೊಟಿಗೊಬ್ಬ3’ ಟೀಸರ್ ರಿಲೀಸ್ ಆಯ್ತು ; ವಿಡಿಯೋ ನೋಡಿ..!

ಅವರ ಅಭಿನಯವೇ ಅವರಿಗೆ ಇಂದು ಎತ್ತರದ ಸ್ಥಾನ ಕಲ್ಪಿಸಿದೆ ಎಂದರೆ ತಪ್ಪಿಲ್ಲ. ಸುದೀಪ್ ನಟನಾಗಿ ಕನ್ನಡ, ತೆಲೆಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಅವರ ನಡೆಸಿಕೊಡುತ್ತಿರುವ ಬಿಗ್ ಬಾಸ್ ಮೂಲಕ ತಮ್ಮ ನಿರೂಪಣೆ ಸಾಮಾಥ್ರ್ಯ ತೋರಿಸಿದ್ದಾರೆ. ಸದ್ಯ ಸುದೀಪ್ ಅವರ ಪಾಲಿಗೆ ಅಂತಾರಾಷ್ಟ್ರೀಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳು ಸೃಷ್ಟಿಯಾಗಿದ್ದು, ಅವರನ್ನ ದೈವದಂತೆ ಪೂಜಿಸುವ ಉದಾಹರಣೆ ಇವೆ.

ಕಿಚ್ಚ ಸುದೀಪ್ ಅಭಿನಯದ ಮೊದಲ ಚಿತ್ರಗಳು

ಸುದೀಪ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು 1997ರಲ್ಲಿ ತಾಯವ್ವ ಆರಂಭಿಸಿದರು. ನಂತರ ಅವರು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರ ನಿರ್ವಹಿಸಿದರು. ಅವರು ಹುಚ್ಚ ಸಿನಿಮಾದಲ್ಲಿ ನಟಿಸಿದ ಉತ್ತಮ ಅಭಿನಯಕ್ಕೆ ದೇಶ ಮಟ್ಟದಲ್ಲಿ ಪ್ರಶಂಸೆಗಳು ಕೇಳಿಬಂದವು. 2008 ರಲ್ಲಿ ರಾಮಗೋಪಾಲ್ ವರ್ಮ ನಿರ್ದೇಶನದ ಫೂಂಕ್ ಚಿತ್ರದ ಮೂಲಕ ಸುದೀಪ್ ಬಾಲಿವುಡ್ ಚೊಚ್ಚಲ ಪ್ರವೇಶ ಮಾಡಿದರು. ನಂತರ ರಾನ್, ಫೂಂಕ್ 2 ಮತ್ತು ರಾಕ್ಷ ಚರಿತ್ರಾ ದಲ್ಲಿ ನಟಿಸಿದ್ದಾರೆ.

ನೀವು ಈವರೆಗೆ ನೋಡಿದ ಕಿಚ್ಚ ಸುದೀಪ್ ಅವರ ಅಪರೂಪದ ಚಿತ್ರಗಳು

ಸುದೀಪ್ ಮೊದಲು ಸಿನಿಮಾ ರಂಗ ಪ್ರವೇಶಿಸಿದಾಗ ಮುಗ್ದ ಮೊಗದ ಹುಡುಗನಂತೆ ಗಮನ ಸೆಳೆಯುತ್ತಿದ್ದರು. ಅವರ ಸಿನಿಮಾ ಪಯಣ ಆರಂಭದಲ್ಲಿನ ಕೆಲ ಚಿತ್ರಗಳು ಇಲ್ಲಿವೆ ಲಿಂಕ್ ಕ್ಲಿಕ್ ಮಾಡಿ. ಕಿಚ್ಚ ಸುದೀಪ್ ಅವರ ಚಿತ್ರಗಳು.

 

Leave a Reply

Your email address will not be published. Required fields are marked *

Trending

Exit mobile version