ಸಿನಿ ಸುದ್ದಿ
‘ವಾಲ್ಮೀಕಿ ಜಯಂತಿ’ಯ ಖುಷಿಯಲ್ಲಿ ಕಿಚ್ಚ ಸುದೀಪ
ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ‘ದಿ ವಿಲನ್ ‘ ಸಿನೆಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಹಾಗೇ ‘ವೀರ ಮದಕರಿ’ ಸಿನೆಮಾದ ವಿವಾದಕ್ಕೂ ಕೂಡ ತೆರೆ ಎಳೆದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ ಕಿಚ್ಚ.
ಇತ್ತೀಚೆಗಷ್ಟೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ವಾಲ್ಮೀಕಿ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗಳಿಂದ ಆಶೀರ್ವಾದವನ್ನೂ ಪಡೆದರು ಕಿಚ್ಚ.
ಅಂದಹಾಗೆ ನಿನ್ನೆ ಆಚರಿಸಿದ ವಾಲ್ಮೀಕಿ ಜಯಂತಿಯಲ್ಲಿಯೂ ಭಾಗವಹಿಸಿರುವ ಕಿಚ್ಚನ ಪೋಟೋವೊಂದು ಈಗ ವೈರಲ್ ಆಗಿದ್ದು ಅಭಿಮಾನಿಗಳು ಸಂತಸದಿಂದ ವಾಲ್ಮೀಕಿ ಜಯಂತಿಯ ಶುಭಕಾಮನೆಗಳನ್ನು ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401