ದಿನದ ಸುದ್ದಿ

ಪ್ರೀತಿಯ ಸುಬ್ಬಿ, ನಿನ್ನಗಲಿಕೆಯ ನೋವು ಹೇಳತೀರದು : ಡಾಲಿಯ ನೋವಿನ ನುಡಿ

Published

on

ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಅಪರೂಪದ ನಟ ರಾಕ್ ಲೈನ್ ಸುಧಾಕರ್ ಬುಧವಾರ ಶೂಟಿಂಗ್ ಸಮಯದಲ್ಲಿ ಮೇಕಪ್ ಹಚ್ಚಿಕೊಳ್ಳುವಾಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಧಾಕರ್ ವಿಶೇಷವಾದ ಧ್ವನಿ, ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

ಮನಸಾರೆ ಸಿನೆಮಾದಲ್ಲಿ ನೀನಾಸಂ ಸತೀಶ್ ಅವರ ಅಪ್ಪನ ಪಾತ್ರ (ಕುರುಡನ ಪಾತ್ರ) ಬಹುತೇಕ ಇವರ ಫ್ಯಾನ್ ಫಾಲೋಯಿಂಗ್ ಅನ್ನು ಹೆಚ್ಚಿಸಿತ್ತು‌. ಹಾಗೇ ಟಗರು ಸಿನೆಮಾದಲ್ಲೂ ಕೂಡ ಸುಬ್ಬಿ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿತು. ಅಧ್ಯಕ್ಷ ಸಿನೆಮಾದಲ್ಲಿ ನಟ ರವಿಶಂಕರ್ ಅವರಿಗೆ ಕೌಂಟರ್ ಕೊಡುವ ಪಾತ್ರದಲ್ಲಿನ ಆಭಿನಯ ಚೆನ್ನಾಗಿಮಾಡಿದ್ದರು.

ಈ ಹಿನ್ನೆಲೆಯಲ್ಲಿ ಟಗರು ಸಿನೆಮಾದಲ್ಲಿ ಡಾಲಿ ಧನಂಜಯ್ ಜೊತೆ ಸುಬ್ಬಿ ಪಾತ್ರದ ಅಭೂತಪೂರ್ವ ಯಶಸ್ಸು ಕಂಡಿತು. ನಟ ಡಾಲಿ ಸುಬ್ಬಿ ಪಾತ್ರಧಾರಿ ರಾಕ್ ಲೈನ್ ಸಾವಿಗೆ ನೋವಿನಿಂದ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರೀತಿಯ ಸುಬ್ಬಿ,

ಸಿಕ್ಕಾಗಲೆಲ್ಲ ನಗಿಸುತ್ತ, ಬದುಕಿನ ಫಿಲಾಸಫಿಗಳ ನಿನ್ನದೇ ರೀತಿಯಲ್ಲಿ ಅದ್ಭುತವಾಗಿ ಹೇಳುತ್ತ, ಪ್ರೀತಿಯಿಂದ ತಬ್ಬಿ ಒಳ್ಳೆಯದೆ ಆಗುತ್ತದೆ ಎಂದು ಹರಸುತ್ತಿದ್ದೆ. ನಿನ್ನಗಲಿಕೆಯ ನೋವು ಹೇಳತೀರದು. ಶಾಂತಿಯಿಂದ ನಿದ್ರಿಸು. ಎಂದು ಅಂತಿಮ ನಮನ ಸಲ್ಲಿಸಿದ್ದಾರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ

https://m.facebook.com/story.php?story_fbid=202396181245879&id=100044264957540

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version