ದಿನದ ಸುದ್ದಿ

30ನೇ ವರ್ಷದ ದಾಂಪತ್ಯಕ್ಕೆ ಕಾಲಿಟ್ಟ ಸುಹಾಸಿನಿ ದಂಪತಿ

Published

on

ಸುದ್ದಿದಿನ ಡೆಸ್ಕ್: ಬಹು ಭಾಷಾ ನಟಿ ಹಾಗೂ ಎವರ್ ಯಂಗ್ ಲೇಡಿ ಎಂದೇ ಖ್ಯಾತಿ ಪಡೆದಿರುವ ನಟಿ ಸುಹಾಸಿನಿ ಅವರು ಪತಿ ಹಾಗೂ ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ 30ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಭಾನುವಾರಕ್ಕೆ ಸುಹಾಸಿನಿ ಹಾಗೂ ಮಣಿರತ್ನಂ ಅವರು ಮದುವೆಯಾಗಿ 3 ದಶಕಗಳು ತುಂಬಿದ್ದು, ಈ ಫೋಟೊಗಳನ್ನು ಸುಹಾಸಿನಿ ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಮಾಡಿರುವ ಚಿತ್ರದಲ್ಲಿ ಸುಹಾಸಿನಿ ಅವರು ಮಣಿರತ್ನಂ ಅವರಿಗೆ ಕೇಕ್ ತಿನ್ನಿಸುತ್ತಿರುವ ದೃಶ್ಯ ಇದೆ.
ಸುಹಾಸಿನಿ ಅವರ ಸಾವಿರಾರು ಅಭಿಮಾನಿಗಳು ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದ್ದಾರೆ.
ಮಣಿರತ್ನಂ ಕುಟುಂಬ ತುಂಬ ಚಿಕ್ಕದು. ಸುಹಾಸಿನಿ ಅವರಿಗೆ ನಂದನ್ ಮಣಿರತ್ನಂ ಎಂಬ ಪುತ್ರ ಇದ್ದಾನೆ.

Leave a Reply

Your email address will not be published. Required fields are marked *

Trending

Exit mobile version