ದಿನದ ಸುದ್ದಿ
ಸಿಎಂ ತವರು ಜಿಲ್ಲೆ ಹಾಸನದಲ್ಲಿ ನಿಲ್ಲದ ರೈತರ ಆತ್ಮಹತ್ಯೆ; ಜಿಲ್ಲೆಯಲ್ಲಿ ಒಟ್ಟು 70 ಬಲಿ
ಸುದ್ದಿದಿನ ಡೆಸ್ಕ್ : ಹಾಸನದ ಅರಕಲಗೂಡು ತಾಲ್ಲೂಕಿ ನಲ್ಲಿ ಸಾಲಭಾದೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೇಟೆಮಾಚಗೌಡನ ಹಳ್ಳಿಯ ಕಾಂತರಾಜ್(45) ಮರಕ್ಕೆ ನೇಣು ಬಿಗಿದುಕೊಂಡಿದ್ದು,ಮತ್ತೊಬ್ಬ ಯುವ ರೈತ ನಿಲಕುಂದ ಗ್ರಾಮದ ಸಂದೀಪ್(25) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ಇಬ್ಬರು ಕೃಷಿಗೆ ಬ್ಯಾಂಕ್ ಹಾಗೂ ಖಾಸಗಿ ವಲಯದಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದು ಸಾಲಮನ್ನಾ ಭರವಸೆ ನೀಡಿದ್ದರೂ ನಿಂತಿಲ್ಲ ರೈತರ ಆತ್ಮಹತ್ಯೆ. ಹೊಸ ಸರ್ಕಾರ ಬಂದ ನಂತರವೂ ಜಿಲ್ಲೆಯಲ್ಲಿ 70 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 165 ರೈತ ಆತ್ಮಹತ್ಯೆ ಗಳಲ್ಲಿ 70 ರೈತರು ಸಾಲಬಾಧೆ ಗೆ ಮೃತರೆಂದು ಜಿಲ್ಲಾಡಳಿತ ದೃಢಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401