/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಸುಳ್ವಾಡಿ ವಿಷ ಪ್ರಸಾದ ಸೇವನೆ ಪ್ರಕರಣ : ತಪ್ಪು ಯಾರೆ ಮಾಡಿದ್ರು ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆಯಾಗಿದೆ : ಸಿದ್ದರಾಮಯ್ಯ

Published

on

ಸುದ್ದಿದಿನ,ಮೈಸೂರು :ಸುಳ್ವಾಡಿಯ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಘಟನೆ ಪುಡ್ ಪಾಯಿಸನ್ ನಿಂದ ಅಗಿಲ್ಲ. ಯಾರೋ ಪಾತಕಿಗಳು‌ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು. ಈಗಾಗಲೇ ಸಿ.ಎಂ.ತನಿಖೆಗೆ ಆದೇಶ ಮಾಡಿದ್ದಾರೆ. ನಾನು ಕೂಡ ಸಿ.ಎಂ.ಬಳಿ ಮಾತನಾಡಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸ್ತೇನೆ.‌ ಈ ಘೋರ ದುರಂತದ ಘಟನೆಗೆ ಕಾರಣತಾದ ಪಾತಕಿಗಳಿಗೆ‌ ಶಿಕ್ಷೆಯಾಗಬೇಕು ಎಂದು ಮೈಸೂರಿನಲ್ಲಿ ಮಾಜಿ ಸಿ.ಎಂ. ಸಿದ್ರಾಮಯ್ಯ ಹೇಳಿದರು.

ವಿಷದ ಅಂಶ ಹೊಟ್ಟೆಯೊಳಗೆ ಸೇರಿರೋ ಕಾರಣ. ರೋಗಿಗಳು ಹೊರಳಾಡೋದು, ನರಳಾಡೋದು ಮಾಡ್ತಿದ್ದಾರೆ.
ಆದ್ರೆ ದೇವರ ಪ್ರಸಾದದಲ್ಲಿ ವಿಷ ಹಾಕೋದು ಅಂದ್ರೆ ಇದು ದುರಂತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಘಟನೆ ನಡೆದಿರೋದು ದೊಡ್ಡ ದುರಂತ.ಈಗಾಗಲೇ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ 5ಲಕ್ಷ ಘೋಷಣೆ ಆಗಿದೆ.ಏನೂ ತಪ್ಪು ಮಾಡದ ಅಮಾಯಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ತಪ್ಪು ಯಾರೆ ಮಾಡಿದ್ರು ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆಯಾಗಿದೆ. ಪಂಚಾಮೃತ ಹಾಗೂ ಬಾತ್‌ನಲ್ಲಿ ವಿಷ ಹಾಕಲಾಗಿದೆ. ಇದು ಫುಡ್ ಪಾಯಿಸನ್‌ನಿಂದ ಆಗಿರೋದಲ್ಲ.
ಹಾಗಾಗಿ ಎಲ್ಲ ಮಾಹಿತಿಯನ್ನ ವೈದ್ಯರ ಬಳಿ ಪಡೆದುಕೊಂಡಿದ್ದೇನೆ. ಮೃತರ ಕುಟುಂಬಕ್ಕೆ ದೇವರ ದುಖ ಭರಿಸುವ ಶಕ್ತಿ ನೀಡಲಿ‌ ಎಂದರು

ಕುಟುಂಬದಲ್ಲಿನ ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ಸರ್ಕಾರದಿಂದ ಸಹಾಯ ಮಾಡಲಾಗುವುದು. ಕೆಆರ್ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯವಿದೆ. ವೈದ್ಯರು ಅಸ್ವಸ್ಥರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version