ರಾಜಕೀಯ
ನಂಗೆ ಪಕ್ಷ ಇಲ್ಲ, ಅಂಬರೀಶ್ ಅವ್ರೇ ನನ್ನ ಪಕ್ಷ : ಸುಮಲತಾ
ಸುದ್ದಿದಿನ,ಮಂಡ್ಯ: ‘ನನಗೆ ಪಕ್ಷ ಇಲ್ಲ, ಅಂಬರೀಶ್‌ರವರೇ ನನ್ನ ಪಕ್ಷ’ ಎಂದು ಸುಮಲತಾ ಅಂಬರೀಶ್ ಭಾವುಕರಾದರು. ಜಿಲ್ಲೆಯ ಅರಕೆರೆಯಲ್ಲಿರುವ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನಿಮ್ಮ ಬೆಂಬಲ ಇದ್ರೆ ನಾನು ಮುಂದಿನ ನಿರ್ಧಾರ ಕೈಗೊಳ್ತೀನಿ.
ನನಗೆ ಇವತ್ತು ಪಕ್ಷ ಇಲ್ಲ, ಅಂಬರೀಶ್ ಅವರೇ ನಮ್ಮೆಲ್ಲರ ಪಕ್ಷ. ನಾನು ನೋವಿನಲ್ಲಿದ್ದಾಗ ಕಣ್ಣೀರು ಒರೆಸೋಕೆ ನೀವೆಲ್ಲ ಬಂದ್ರಿ. ನೀವೆಲ್ಲಾ ಬಂದು ನಮ್ಮ ಜೊತೆ ಇರುವಂತೆ ಕೇಳಿದ್ರಿ. ನಿಮ್ಮೆಲ್ಲರ ಆಸೆಗೆ ನಾನು ಇವತ್ತು ಸ್ಪಂದಿಸಬೇಕಿದೆ. ಇಂದು ನನ್ನ ಜೊತೆ ಯಾರಿದ್ದಾರೆ, ಯಾರಿಲ್ಲ ಅನ್ನೋದು ಮುಖ್ಯವಲ್ಲ. ನನ್ನ ಜೊತೆ ನೀವೆಲ್ಲ ಇದ್ದೀರಾ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಚಿರಋಣಿ ಅಂತಾ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401