ದಿನದ ಸುದ್ದಿ
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
ಸುದ್ದಿದಿನಡೆಸ್ಕ್:ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗ ಹಾಗೂ V 1 ಕಾವ್ಯಧಾರೆಯ ಸಹಯೋಗದೊಂದಿಗೆ ಏಪ್ರಿಲ್ ತಿಂಗಳ ಕಾರ್ಯಕ್ರಮವನ್ನು ಏಪ್ರಿಲ್ 10 ರ ಗುರುವಾರ ಮಧ್ಯಾಹ್ನ 3.30 ಕ್ಕೆ ಲೇಖಕಿ ಶ್ರೀಮತಿ ವೀಣಾ ಕೃಷ್ಣಮೂರ್ತಿ ಅವರ ದಾವಣಗೆರೆ ಸೋಮೇಶ್ವರ ಸ್ಕೂಲ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆಯ ಲೆನಿನ್ ನಗರದ ನಿವಾಸದಲ್ಲಿ ಆಯೋಜಿಸಲಾಗಿತ್ತು .
ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ಹಾಗೂ V1 ಕಾವ್ಯಧಾರೆಯ ನಿರ್ದೇಶಕರಾದ ಚಿದಾನಂದ್ ಅವರ ನೇತೃತ್ವದಲ್ಲಿ ರಜಾ – ಮಜ ಶೀರ್ಷಿಕೆಯಡಿ ಶಾಲಾ ಮಕ್ಕಳಿಗೆ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಕವಿ ಶಿವಯೋಗಿ ಹಿರೇಮಠ ಮಕ್ಕಳಿಗೆ ನೀತಿ ಕಥೆ ಹೇಳಿದರು.
ಆರೋಗ್ಯಾಧಿಕಾರಿ ಜಿ ಕುಲಕರ್ಣಿ ಅವರು ಬೇಸಿಗೆ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸಲಹೆ – ಸೂಚನೆ ನೀಡಿದರು. ವಿರೂಪಾಕ್ಷಪ್ಪ ಪಂಡಿತ್ ಮಕ್ಕಳ ಆತ್ಮವಿಶ್ವಾಸ ಕುರಿತು ಮಾತನಾಡಿದರು.
ಹೆಚ್ ಆರ್ ವೆಂಕಣ್ಣನವರ್, ಎಸ್ ನಾಗರಾಜ್ ಮಲ್ಲಮ್ಮ ನಾಗರಾಜ್, ಮಂಜುಳಾ ಸುನಿಲ್ ಮಕ್ಕಳ ಕವನ ವಾಚಿಸಿದರು. ಲಲಿತ್ ಕುಮಾರ್ ಜೈನ್ ಕನ್ನಡ ಕಲಿಕೆ ಬಗ್ಗೆ ಹಾಗೂ ನಿವೃತ್ತ ಶಿಕ್ಷಕಿ ಕಮಲಮ್ಮ ಅವರು ದಾವಣಗೆರೆ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಹೇಳಿದರು.
ವೀಣಾ ಕೃಷ್ಣಮೂರ್ತಿ, ಉಮಾದೇವಿ ಹಿರೇಮಠ, ಸುಶೀಲ ಬಸವರಾಜ್ ಹಿರೇಮಠ, ಮಹಾದೇವಮ್ಮ ಅವರು ಶಿಶುಗೀತೆ ಹಾಡಿದರು. ಸಂಧ್ಯಾ ಸುರೇಶ್ ಚಟುವಟಿಕೆ ಮೂಲಕ ಜ್ಞಾನಾರ್ಜನೆ ಕುರಿತು ವಿವರಿಸಿದರು.
ಅಂತಿಮವಾಗಿ ಮಕ್ಕಳ ಬೇಸಿಗೆ ರಜೆ ರಚನಾತ್ಮಕ, ಸೃಜನಾತ್ಮಕ ಕಲಿಕೆಗೆ ಸದುಪಯೋಗವಾಗುವ ಜೊತೆ ಆಹ್ಲಾದಕರವಾಗಿರಲಿ ಎಂದು ಬಳಗದ ಎಲ್ಲಾ ಸದಸ್ಯರು ಆಶಿಸಿ ಶುಭ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243