ಸಿನಿ ಸುದ್ದಿ
ಹಾಟ್ ಬೆಡಗಿ ಸನ್ನಿ ಲಿಯೋನ್ ಈಗ ಕಾಲಿವುಡ್ ಗೆ ಎಂಟ್ರಿ
ಸುದ್ದಿದಿನ ಡೆಸ್ಕ್: ಮಾಜಿ ನೀಲಿ ತಾರೆ, ಹಾಟ್ ಬೆಡಗಿಸನ್ನಿ ಲಿಯೋನ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ದೊಡ್ಡ ಪರದೆ, ಸಣ್ಣ ಪರದೆಯ ನಂತರ ಇತ್ತೀಚಿಗೆ ವೆಬ್ ಸರಣಿಯಲ್ಲೂ ಕಾಣಿಸಿಕೊಂಡಿದ್ದು, ಹೆಸರು ಪಡೆದಿದ್ದಾರೆ.
ಈಗ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಮುಂಬರಲಿರುವ ‘ವೀರಮಾದೇವಿ’ ಚಿತ್ರದ ಮೂಲಕ ಚಿತ್ರರಸಿಕರ ಮನ ಗೆಲ್ಲಲು ಸಿದ್ದರಾಗಿದ್ದಾರೆ. ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡು ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡ ಸನ್ನಿ ಲಿಯೋನ್ ಈಗ ದಕ್ಷಿಣ ಭಾರತದತ್ತ ಮುಖ ಮಾಡಿ, ಯಶಸ್ಸಿನ ಎದುರು ನೀಡುತ್ತಿದ್ದಾರೆ.
ವೀರಮಾದೇವಿ ಚಿತ್ರದಲ್ಲಿ ತಮ್ಮ ಮೆಚ್ಚಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಸನ್ನಿ ಲಿಯೋನ್ ತಿಳಿಸಿದ್ದಾರೆ.
Sunny Leon enter to Tamil film