ಸಿನಿ ಸುದ್ದಿ

‘ದಂತದಗೊಂಬೆ ಸನ್ನಿಲಿಯೋನ್’ ಬೆಂಗಳೂರಿಗೆ..!

Published

on

ಸುದ್ದಿದಿನ ಡೆಸ್ಕ್ : ದಂತದ ಗೊಂಬೆ ಸನ್ನಿಲಿಯೋನ್ ನವೆಂಬರ್ 3ರಂದು ಬೆಂಗಳೂರಿಗೆ ಬರಲಿದ್ದಾರೆ. ಸನ್ನಿ ಲಿಯೋನ್ ಬರೋದಕ್ಕೆ ಪೊಲೀಸರು ಒಪ್ಪಿಗೆ ಕೊಟ್ಟಿದ್ದಾರೆ. ಅಂದು ನಡೆಯುವ ‘ಪ್ಯೂಸನ್ ನೈಟ್’ ಕಾರ್ಯಕ್ರಮಕ್ಕೆ ಬಂದು ಅಭಿಮಾನಿಳಿಗೆ ರಸದೌತಣ ನೀಡಲಿದ್ದಾರೆ ಸನ್ನಿ.

ಈ ಹಿಂದೆಯೂ ಸನ್ನಿ ಒಂದು ಕಾರ್ಯಾಕ್ರಮಕ್ಕೆ ಬೆಂಗಳೂರಿಗೆ ಬರಬೇಕಿತ್ತು. ಆ ಕಾರ್ಯಕ್ರಮಕ್ಕೆ ಎಲ್ಲ ತಯಾರಿಯೂ ನಡೆದಿತ್ತು. ಆದರೆ ಕನ್ನಡ ಪರ ಸಂಘಟನೆಗಳು ಅದ್ಯಾಕೋ ವಿರೋಧವ್ಯಕ್ತ ಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಮಾಡಿ ಆಯೋಜಕರು ಬೇಸರಗೊಂಡಿದ್ದರು.

ಆದರೆ ಈ ಬಾರಿ ಸನ್ನಿ ಸಿಲಿಕಾನ್ ಸಿಟಿಗೆ ಬರೋದಕ್ಕೆ ಪೊಲೀಸರು ಅನುಮತಿ ನೀಡಿದ್ದು, ಹಲವು ಕಂಡಿಷನ್ ವಿಧಿಸಿದ್ದಾರೆ. ನವೆಂಬರ್ 3ನೇ ತಾರೀಖು ನಡೆಯಲಿರುವ ಫ್ಯೂಸನ್ ನೈಟ್ ಕಾರ್ಯಕ್ರಮಕ್ಕೆ ಸನ್ನಿ ಬರಲಿದ್ದಾರೆ. ಈ ಕಾರ್ಯಕ್ರಮವನ್ನ ಗಾಯಕ ರಘು ದೀಕ್ಷಿತ್ ಮತ್ತು ಸನ್ನಿ ಲಿಯೋನ್ ನಡೆಸಿಕೊಡಲಿದ್ದು, ನಾಗವಾರದ ವೈಟ್ ಆರ್ಕೀಡ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಆದರೆ ಈ ಬಾರಿ ಸನ್ನಿ ಬೆಂಗಳೂರು ಬರೋದು ಖಾಯಂ ಆಗಿದ್ದು, ಪೊಲೀಸರು ಕೆಲವು ಕಂಡೀಷನ್ ಗಳನ್ನು ಹಾಕಿದ್ದಾರೆ. ಈ ಕಂಡೀಷನ್ ಗಳಿಗೆ ಸನ್ನಿ ಹಾಗೂ ಕಾರ್ಯಕ್ರಮದ ಆಯೋಜಕರು ಒಪ್ಪಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಾಯಕ ರಘುದೀಕ್ಷಿತ್ ಹಾಗೂ ಸನ್ನಿ ಆಭಿಮಾನಿಗಳ ಮನರಂಜಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version