ಸಿನಿ ಸುದ್ದಿ
ಮೇಣದ ಪ್ರತಿಮೆಯಲ್ಲಿ ಮಿಂಚಿದ ಸನ್ನಿ ಲಿಯೋನ್ !
ಸುದ್ದಿದಿನ ಡೆಸ್ಕ್: ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಈಚಗೆ ಹೆಚ್ಚು ಪ್ರಸಿದ್ಧ ವ್ಯಕ್ತಿ ಹೊಂದಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣಕ್ಕೆ ದೆಹಲಿಯ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಮಾಜಿ ನೀಲಿಚಿತ್ರ ತಾರೆ, ನಟಿ ಸನ್ನಿ ಲಿಯೋನ್ ಅವರ ಮೇಣದ ಪ್ರತಿಮೆ ನಿಮೀಸಿದ್ದು, ಮಂಗಳವಾರ ಸ್ವತಃ ಸನ್ನಿ ಲಿಯೋನ್ ಅವರೇ ಪ್ರತಿಮೆ ಅನಾವರಣಗೊಳಿಸಿದ್ದಾರೆ.
ಈ ಹಿಂದೆ ಖ್ಯಾತ ನಟ ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಶಾರುಖ್ ಖಾನ್, ಅನಿಲ್ ಕಪೂರ್ ಸೇರಿದಂತೆ ಹಲವು ಪ್ರಮುಖರ ಮೇಣದ ಪ್ರತಿಮೆಗಳನ್ನು ದೆಹಲಿಯ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ನಿರ್ಮಿಸಲಾಗಿತ್ತು.
ಮ್ಯೂಸಿಯಂನಲ್ಲಿ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿರುವುದಕ್ಕೆ ಸನ್ನಿ ಲಿಯೋನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಕಲಾವಿದರೆಗೆ ನಾನು ಧ್ಯನವಾದ ತಿಳಿಸುತ್ತೆÃನೆ ಎಂದು ಸನ್ನಿ ಲಿಯೋನ್ ತಿಳಿಸಿದ್ದಾರೆ. ಸದ್ಯ ಸನ್ನಿ ಲಿಯೋನ್ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.