ದಿನದ ಸುದ್ದಿ
ತುರ್ತು ಅರ್ಜಿಗೆ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್: ಅನರ್ಹ ಶಾಸಕರಿಗೆ ಹಿನ್ನಡೆ
ಸುದ್ದಿದಿನ,ದೆಹಲಿ: ಸ್ಪೀಕರ್ ತಮ್ಮ ಶಾಸಕತ್ವವನ್ನು ಅನರ್ಹಗೊಳಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಅಮಾನತುಗೊಂಡಿರುವ ಶಾಸಕರು, ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ತುರ್ತಾಗಿ ಸಚಿವ ಸಂಪುಟ ಸೇರುವ ಉಮೇದಿನಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ 17 ಶಾಸಕರಿಗೆ ಹಿನ್ನಡೆಯಾದಂತಾಗಿದೆ.