ದಿನದ ಸುದ್ದಿ

ಸುಪ್ರೀಂ ಐತಿಹಾಸಿಕ ತೀರ್ಪು: ಸಲಿಂಗಕಾಮ ಅಪರಾಧವಲ್ಲ

Published

on

ಸುದ್ದಿದಿನ ಡೆಸ್ಕ್ : ಸಲಿಂಗಕಾಮದ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸಲಿಂಗಕಾಮಕ್ಕೆ ಮಾನ್ಯತೆ ನೀಡುವ ಕುರಿತು ದೇಶದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿವೆ. ಈ ನಡುವೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸಲಿಂಗಕಾಮ ಅಪರಾಧವೇ, ನ್ಯಾಯ ಸಮ್ಮತವೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸಲಿಂಗಕಾಮ ಅಪರಾಧ ಅಲ್ಲ ಎಂದು ಹೇಳಿದೆ.

ಎಲ್ ಜಿಬಿಟಿ ಸಮುದಾಯಕ್ಕೂ ಸಮಾನ ಹಕ್ಕಿದೆ ಎಂದು ಹೇಳಿರುವ ಸಿಜೆಐ ದೀಪಕ್ ಮಿಶ್ರಾ, ನ್ಯಾ. ರೊಹಿಂಟನ್ ನಾರಿಮನ್, ನ್ಯಾ.ಖಾನವಿಲ್ಕರ್, ನ್ಯಾ. ಚಂದ್ರಚೂಡ್ ಹಾಗೂ ನ್ಯಾ.ಇಂದು ಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನ ಪೀಠ ಹೇಳಿದೆ.

Leave a Reply

Your email address will not be published. Required fields are marked *

Trending

Exit mobile version