ದಿನದ ಸುದ್ದಿ
ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ತೀರ್ಪು| ತೀರ್ಪನ್ನು ಪರಿಶೀಲಿಸುವ, ವರ್ಗಾಯಿಸುವ ಅಗತ್ಯವಿಲ್ಲ : ಸುಪ್ರೀಂ
ಸುದ್ದಿದಿನ ಡೆಸ್ಕ್ : 2006ರಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಕುರಿತು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠವು, ಇದರ ಕುರಿತಾದ ಮೇಲ್ಮನಿಯ ಅರ್ಜಿಯನ್ನು 7 ಸದಸ್ಯರನ್ನುಳ್ಳ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದೆ.
ಸರ್ಕಾರಿ ಹುದ್ದೆಗಳಲ್ಲಿನ ಬಡ್ತಿ ಮೀಸಲಾತಿಯನ್ನು ಪರಿಷ್ಕರಣೆ ಮಾಡಬೇಕಾದರೆ ದೇಶದಲ್ಲಿರುವ ಎಸ್ಸಿ/ಎಸ್ಟಿಯ ಒಟ್ಟಾರೆ ಜನ ಸಂಖ್ಯೆಯ ಎಲ್ಲಾ ಅಂಕಿ ಅಂಶಗಳನ್ನು ಸಂಗ್ರಹಿಸಬೇಕಾಗಿದೆ. ಈ ಪ್ರಕ್ರಿಯೆಯು ಒಂದು ಸುದೀರ್ಘ ಪ್ರಕ್ರಿಯೆಯಾಗಿದ್ದು ಎಂದು ಸುಪ್ರೀಂ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಅಂಕಿಅಂಶಗಳ ಸಂಗ್ರಹವು ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿತು.
ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡಂತಹ ಪಂಚ ಸದಸ್ಯರ ಪೀಠವು ಎಸ್ಸಿ/ಎಸ್ಟಿ ಬಡ್ತಿಯಲ್ಲಿಯ ಮೀಸಲಾತಿಯು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟದ್ದೆಂದು ಸ್ಪಷ್ಟವಾಗಿ ಹೇಳಿದೆ.
ಸುಪ್ರೀಂ 2006 ರಲ್ಲಿನ ಎಂ.ನಾಗರಾಜ್ ಪ್ರಕರಣದಲ್ಲಿ ನೀಡಿದ್ದಂತಹ ತೀರ್ಪನ್ನು ಎತ್ತಿ ಹಿಡಿದಿದ್ದು, ನೀಡಿದ ತೀರ್ಪನ್ನು ಪುನರ್ ಪರಿಶೀಲಿಸುವುದಾಗಲಿ ಅಥವಾ ಮೇಲಿನ ಯಾವುದೇ ನ್ಯಾಯಾಲಯದಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401