ದಿನದ ಸುದ್ದಿ

ಅಯ್ಯೋಧ್ಯ ವಿವಾದ : ‘ನಮಾಜ್ ಗೆ ಮಸೀದಿ ಬೇಕಿಲ್ಲ’; ‘ಸುಪ್ರೀಂ ತೀರ್ಪು’ ಒಪ್ಪದ ನ್ಯಾ. ನಜೀರ್

Published

on

ಸುದ್ದಿದಿನ ಡೆಸ್ಕ್ : ನಮಾಜ್ ಮಾಡಲು ಮುಸ್ಲಿಂ ಸಮುದಾಯಕ್ಕೆ ಮಸೀದಿಯ ಅಗತ್ಯವೇ ಇಲ್ಲವೆಂದು ಸುಪ್ರೀಂಕೋರ್ಟ್ ತ್ರಿಪೀಠ ಅಭಿಪ್ರಾಯಪಟ್ಟಿದ್ದು, 1994 ರ ಫಾರೂಕಿ ತೀರ್ಪನ್ನು ಗುರುವಾರ ಎತ್ತಿ‌ಹಿಡಿದಿದೆ.

ಮುಖ್ಯನ್ಯಾಯಮೂರ್ತಿಯವರಾದ ದೀಪಕ್ ಮಿಶ್ರಾ, ನ್ಯಾಯ ಮೂರ್ತಿ ನಜೀರ್,ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡಿದ್ದ ನ್ಯಾಯ ಪೀಠವು ಅಯ್ಯೋಧ್ಯೆಯ ಭೂವಿವಾದವನ್ನು ಕುರಿತು ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ರಾಮ ಮಂದಿರ ನಿರ್ಮಿಸುವ ಜಾಗದ ಕುರಿತಾಗಿ, ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಮುಂದಿನ ಅಕ್ಟೋಬರ್ 29 ರಿಂದ ವಿಚಾರಣೆ ಆರಂಭವಾಗಲಿದೆ.

ಅಕ್ಟೋಬರ್ 2ಕ್ಕೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿ ಹೊಂದುತ್ತಿದ್ದಾರೆ. ಇದು ದೀಪಕ್ ಮಿಶ್ರಾ ಅವರ ಕೊನೆಯ ತೀರ್ಪು ಆಗುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ಹಂತದ ವಿಚಾರಣೆಯನ್ನು ಶೀಘ್ರವಾಗಿ ಪೂರೈಸಲು ಇಂದು ತೀರ್ಮಾನಿಸಲಾಗಿದೆ.

ಮಸೀದಿಯ ನಿರ್ಮಾಣ ಜಾಗದ ವಿವಾದವನ್ನು ಕುರಿತು ಮೂವರು ನ್ಯಾಯಮೂರ್ತಿಗಳಲ್ಲಿ 2:1 ರಲ್ಲಿ (ಮಾತ್ರ) ತೀರ್ಪು ಹೊರಬಿದ್ದಿದೆ. ಆದರೆ ನ್ಯಾಯಮೂರ್ತಿ ನಜೀರ್ ಅವರು ದೀಪಕ್ ಮಿಶ್ರಾ ಹಾಗೂ ಅಶೋಕ್ ಭೂಷಣ್ ಅವರನ್ನು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಂವಿಧಾನಿಕ ಪೀಠದಲ್ಲಿ ಇದರ ಬಗ್ಗೆ ವಿಚಾರಣೆ ನಡೆಯಲಿ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version