ದಿನದ ಸುದ್ದಿ

ಫಸ್ಟ್ ಲುಕ್ ವಿಡಿಯೋ ನೋಡಿ | ಸುಕ್ಕಾ ಸೂರಿಯ ‘ಬ್ಯಾಡ್ ಮ್ಯಾನರ್ಸ್’ ನಲ್ಲಿ ಜೂನಿಯರ್ ರೆಬೆಲ್

Published

on

ಸೂರಿ ಸಿನಿಮಾ ಎಂದರೆ ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾದ ನಿರೂಪಣೆಯಲ್ಲಿ ಇರುತ್ತೆ. ಇನ್ನೂ ಚಿತ್ರದ ಟೈಟಲ್ ಗಳನ್ನೂ ಕೂಡ ಅಷ್ಟೇ ವಿಭಿನ್ನವಾಗಿ ಇಡುತ್ತಾರೆ.

ದುನಿಯಾ ಇಂತಿ ನಿನ್ನ ಪ್ರೀತಿಯ ದಿಂದ ಈ ವರ್ಷ
ತೆರೆಕಂಡ ಪಾಪ್ ಕಾರ್ನ್ ಮಂಕಿ ಸೀನ ಚಿತ್ರದ ವರೆಗೆ ತಮ್ಮದೆ ಆದ ಶೈಲಿಯ ಚಿತ್ರಗಳನ್ನು ಸಿನಿ ಪ್ರಿಯರಿಗೆ ನೀಡಿ ಮನರಂಜಿಸಿದ್ದಾರೆ. ಈಗ
ಮತ್ತೊಂದು ಭಿನ್ನವಾದ ಶೀರ್ಷಿಕೆಯ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ‌.

ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಎಂಬ
ಹೆಸರಿಟ್ಟಿರುವ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟು ಹಬ್ಬ.

ಈ ಹುಟ್ಟು ಹಬ್ಬದ ವಿಶೇಷಕ್ಕಾಗಿ ಅವರ ಅಭಿಮಾನಿಗಳಿಗೆ ಉಡುಗೊರೆಯಾಗಿ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ತುಂಬಾ ಆಕರ್ಷಕವಾಗಿರುವ ಈ ಫಸ್ಟ್ ಲುಕ್ ಪೋಸ್ಟರ್ ಅಂಬಿ ಅವರ ಹುಟ್ಟು ಹಬ್ಬದ ಹಬ್ಬದ ಉಡುಗೊರೆಯಾಗಿದೆ. ಈ ಚಿತ್ರವು
ಶೀಘ್ರದಲ್ಲೇ ಶುರುವಾಗಲಿದೆ.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version