ದಿನದ ಸುದ್ದಿ

ಮಠಾಧೀಶರುಗಳಿಂದ ಕೋವಿಡ್-19 ನಿಧಿಗೆ ದೇಣಿಗೆ : ಕೃತಜ್ಞತೆ ಸಲ್ಲಿಸಿದ ಯಡಿಯೂರಪ್ಪ

Published

on

ಸುದ್ದಿದಿನ,ಬೆಂಗಳೂರು: ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನುಭೇಟಿ ಮಾಡಿದ ವಿವಿಧ ಮಠಾಧೀಶರುಗಳು, ಮುಖ್ಯಮಂತ್ರಿಗಳ ‘ಕೋವಿಡ್19’ ಪರಿಹಾರ ನಿಧಿಗೆ ದೇಣಿಗೆಯ ಚೆಕ್ ನೀಡಿದರು.

ಧರ್ಮದ ರಕ್ಷಣೆ ಮತ್ತು ಪ್ರಸಾರಗಳ ಜೊತೆಗೆ ಅಗತ್ಯ ಸಂದರ್ಭದಲ್ಲಿ ಸಮಾಜದ ನೆರವಿಗೆ ಧಾವಿಸುವ ಮೂಲಕ ಆದರ್ಶ ಮೆರೆದ ಎಲ್ಲ ಮಠಾಧೀಶರುಗಳು, ಸಾಧು ಸಂತರಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version