ಸಿನಿ ಸುದ್ದಿ
ಚೀಟಿಂಗ್ ಕೇಸ್‍ನಲ್ಲಿ ಟಗರು ಬೇಬಿ ಕೃಷ್ಣ..!
ಸುದ್ದಿದಿನ ಡೆಸ್ಕ್: ಟಗರು ಸಿನಿಮಾ ನೋಡಿದವರಿಗೆ ಬೇಬಿ ಕೃಷ್ಣ ಎಂಬ ಪಾತ್ರ ಗಮನ ಸೆಳೆಯದೆ ಇರಲಾರದು. ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿರುವ ದೇವತ್ತ ಅಲಿಯಾಸ್ ಬೇಬಿಕೃಷ್ಣ ವಂಚನೆ ಪ್ರಕರಣದಲ್ಲಿ ಸಿಲುಕಿದ್ದು ಎರಡು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದಾರೆ.
ಉತ್ತರಹಳ್ಳಿಯ ನಿವೇಶನವೊಂದರ ಮಾರಾಟದಲ್ಲಿ ಉದ್ಯಮಿಗೆ ಮೋಸ ಮಾಡಿದ ಪ್ರಕರಣ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೇವದತ್ತ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವತ್ತ ಅವರು ಉದ್ಯಮಿಯನ್ನು ನಂಬಿಸುವ ಸಲುವಾಗಿ ಹೇಳಿರುವ ಸುಳ್ಳುಗಳು ಇಂಟರೆಸ್ಟಿಂಗ್ ಆಗಿದ್ದು, ಅದನ್ನು ನಂಬಿಯೇ ಉದ್ಯಮಿಯು ಹಣ ನೀಡಿದ್ದಾಗಿ ತಿಳಿದುಬಂದಿದೆ.
ದೇವತ್ತ ಅವರು ತಾನು ಮಾಜಿ ಎಂಎಲ್‍ಎ ವೆಂಕಟರಾಯಪ್ಪ ಅವರ ಮೊಮ್ಮಗ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೇ ಟಗರು ಸಿನಿಮಾಕ್ಕೆ ತಾನೇ ಹಣ ಹೂಡಿರುವುದಾಗಿಯೂ ಹೇಳಿ ನಂಬಿಸಿದ್ದಾನೆ. ಈ ವಿಷಯ ತಿಳಿದ ಟಗರು ಸಿನಿಮಾದ ಅಸಲಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ಬೆಚ್ಚಿಬಿದ್ದಿದ್ದಾರೆ.
ಉದ್ಯಮಿಯನ್ನು ನಂಬಿಸುವ ಸಲುವಾಗಿ ದೇವದತ್ತ ಅರು ಇನ್ನಷ್ಟು ಸುಳ್ಳು ಹೇಳಿದ್ದಾರೆ. ಎಸ್‍ಎಸ್ ರಾಜಮೌಳಿ ಅವರ ಮಹಾಭಾರತ ಸಿನಿಮಾದಲ್ಲಿ ತಾವು ಶಕುನಿ ಪಾತ್ರ ನಿರ್ವಹಿಸುತ್ತಿರುವುದಾಗಿಯೂ ಹೇಳಿ ವಂಚಿಸಿದ್ದಾರೆ. ತಾನು ಹೇಳಿದ ಸುಳ್ಳುಗಳನ್ನುಇನ್ನಷ್ಟು ಪುಷ್ಟೀಕರಿಸುವ ದೃಷ್ಟಿಯಿಂದ ದೇವತ್ತ ಅವರು ಮಾಜಿ ಉಪ ಮುಖ್ಯಮಂತಿ ಅಶೋಕ್, ನಟ ಶಿವರಾಜ್ ಕುಮಾರ್, ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೊಗಳನ್ನು ತೋರಿಸಿದ್ದಾರೆ. ಅಲ್ಲದೇ, ತನ್ನ ಹೆಂಡತಿ ಇನ್ಫೋಸಿಸ್ ಸಂಸ್ಥೆಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದೂ ಸುಳ್ಳು ಹೇಳಿದ್ದಾನೆ.
ದೇವದತ್ತ ಹೇಳಿದ ಸುಳ್ಳನ್ನು ನಂಬಿ ಉದ್ಯಮಿಯು 75 ಲಕ್ಷ ರೂ. ಬೆಲೆಯ ನಿವೇಶನಕ್ಕೆ 52 ಲಕ್ಷ ರೂ. ಮುಂಗಡ ಹಣ ನೀಡಿದ್ದರು. ಮರುದಿನ ಬೆಳಗ್ಗೆ ನೋಂದಣಿ ಕಚೇರಿಗೆ ಬಂದು ಸಹಿ ಹಾಕುವುದಾಗಿ ಹೇಳಿದ್ದರು. ಅದರಂತೆ ನೋಂದಣಿ ಕಚೇರಿಯಲ್ಲಿ ಕಾಯುವಾಗ ದೇವದತ್ತ ಬರಲಿಲ್ಲ. ಅನುಮಾನಗೊಂಡು ನಿವೇಶನದ ಬಳಿ ಹೋಗಿ ವಿಚಾರಿಸಿದಾಗ ಸೈಟ್ ದೇವದತ್ತ ಅವರ ಹೆಸರಿನಲ್ಲಿಲ್ಲ ಎಂಬುದು ಗೊತ್ತಾಗಿದೆ. ದತ್ತ ಅವರ ಮೇಲೆ ಪ್ರಕರಣ ದಾಖಲಾದ ಸಮಯದಲ್ಲಿ ಅವರು ಗಾಂಧಿ ನಗರದ ನಿವೇಶನವೊಂದರ ಖರೀದಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಇದೇ ಸಮಯದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಎರಡು ದಿನ ವಿಚಾರಣೆ ನಡೆಸಿದ್ದು, ನಡೆದದ್ದು ಏನೆಂಬ ಸಂಪೂರ್ಣ ಚಿತ್ರಣ ಸಿಕ್ಕಿದೆ.