ಸಿನಿ ಸುದ್ದಿ
ಸಾಧು ಜೊತೆ ‘ಟಗರು ಸರೋಜ’…!
ಸುದ್ದಿದಿನ ಡೆಸ್ಕ್: ಮೊಗ್ಗಿನ ಮನಸ್ಸು, ಬಚ್ಚನ್ ಸಿನೆಮಾ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರ ನಿರ್ಮಾಣದ ‘ತಾಯಿಗೆ ತಕ್ಕ ಮಗ’ ಸಿನೆಮಾವು ಚಿತ್ರೀಕಣದ ಹಂತದಲ್ಲೇ ಹಾಗೊಂದು-ಹೀಗೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ.
ಯಾಕಂದ್ರೆ, ಇತ್ತೀಚೆಗೆ ಸಿನೆಮಾತಂಡವು ಕಾಮಿಡಿ ಕಿಂಗ್ ಸಾಧು ಕೂಕಿಲ ಜೊತೆಗೆ ಟಗರು ಖ್ಯಾತಿಯ ತ್ರಿವೇಣಿ ಅಲಿಯಾಸ್ ಕಾನ್ಸ್ಟಬಲ್ ಸರೋಜ ಅವರೊಂದಿಗಿನ ನಟಿಸಿರುವ ಕೆಲವು ಹಾಸ್ಯ ದೃಶ್ಯಗಳ ಚಿತ್ರೀಕರಣ ನಡೆದಿದ್ದು ಸಿನೆಮಾ ಬಗ್ಗೆ ಕುತೂಹಲ ಮೂಡಿಸಿದೆ.
ಅಂದಹಾಗೆ ಈ ಸಿನೆಮಾದಲ್ಲಿ ‘ಅಜಯ್ ರಾವ್’ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ‘ಎಕ್ಸ್ ಕ್ಯೂಸ್ ಮಿ’ ಸಿನೆಮಾದಲ್ಲಿ ಅಜಯ್ ರಾವ್ ಗೆ ತಾಯಿಯಾಗಿ ನಟಿಸಿದ ಸುಮಲತಾ ಈ ಸಿನೆಮಾದಲ್ಲಿಯೂ ತಾಯಿಯ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ. ಹಾಗೆಯೇ ನಾಯಕಿಯಾಗಿ ಆಶಿಕಾರಂಗಾಥ್ ಅಜಯ್ ರಾವ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು, ಸಿನೆಮಾಗೆ ಹೊಸ ಪ್ರತಿಭೆ ‘ವೇದಗುರು’ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.