ದಿನದ ಸುದ್ದಿ

ತಾಜ್ ಮಹಲ್ ಸಂರಕ್ಷಣೆ | ಕೇಂದ್ರವನ್ನು ತರಾಟೆಗೆ ತೆಗೆದು ಕೊಂಡ ಸುಪ್ರೀಂ

Published

on

ಸುದ್ದಿದಿನ ಡೆಸ್ಕ್ | ಗತ್ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್‌ಮಹಲ್ ರಕ್ಷಣೆ ಮಾಡುವಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರದ ನಿಷ್ಕ್ರಿಯತೆ ಗಮನಿಸಿದ ಸುಪ್ರೀಂ ಕೋರ್ಟ್ ಈ ಎರಡು ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಮುಘಲ್ ಕಾಲದ ಸ್ಮಾರಕ ಸಂಕ್ಷರಣೆ ಬಗ್ಗೆ ಆದಿತ್ಯನಾಥ್ ಸರ್ಕಾರ ದೂರದೃಷ್ಟಿ ಯೋಜನೆ ಸಲ್ಲಿರುವಲ್ಲಿ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಆಕ್ರೋಶ ಹೊರಹಾಕಿದೆ.

ತಾಜ್ ಮಹಲ್ ವೀಕ್ಷಣೆಗೆ ಪ್ರತಿ ವರ್ಷವೂ ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುತ್ಥಾರೆ. ಇಂತಹ ಸ್ಮಾರಕದ ನಿರ್ವಹಣೆ ಕುರಿತು ಸಲ್ಲಿಸಿದ್ದ ಆರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುತ್ತಿದ್ದ ವೇಳೆ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ತಾಜ್‌ಮಹಲ್ ಸಂರಕ್ಷಣೆ ಕುರಿತು ಸಾಂವಿಧಾನಿಕ ಸ್ಥಾಯಿ ಸಮಿತಿ ನೀಡಿರುವ ವರದಿ ಕಠಿಣ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೇ ತಾಜ್ ಮಹಲ್ ರಕ್ಷಣೆಗೆ ಅಗತ್ಯತೆಗಳ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.

ತಾಜ್‌ಮಹಲ್ ಸ್ಮಾರಕ ಆವರಣದ ಒಳಗೆ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಾಲಿನ್ಯ ಬಗ್ಗೆ ಕಾನ್‌ಪುರದ ಐಐಟಿ ಸಂಶೋಧಕರು ಮಾಹಿತಿ ಕಲೆ ಹಾಕುತ್ತಿದ್ದಾರೆ, ಇದನ್ನು ಇನ್ನು ನಾಲ್ಕು ತಿಂಗಳಲ್ಲಿ ಸಲ್ಲಿಸಲಿದ್ದಾರೆ. ಇದಕ್ಕಾಗಿ ವಿಶೇಷ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದೆ.

ಸ್ಮಾರಕ ಸಂರಕ್ಷಣಯಲ್ಲಿ ವಿಫಲವಾಗಿದೆ ಎಂದು ಪ್ರಸಕ್ತ ಸಾಲಿನ ಆರಂಭದಲ್ಲಿ ಸುಪ್ರೀ ಕೋರ್ಟ್ ಆರ್ಖೆಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್‌ಐ)ವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಶ್ವೇತ ವರ್ಣದ ಮಾರ್ಬಲ್ ಹಳದಿ ಬಣ್ಣಕ್ಕೆ ತಿರುಗುತ್ತಿರುವುದನ್ನು ಗಮನಿಸಿ ಇದೇ ವೇಳೆ ಉಲ್ಲೇಖ ಮಾಡಿದೆ. ತಾಜ್‌ಮಹಲ್ ಸಂರಕ್ಷಣೆ ಕುರಿತು ವಿಚಾರಣೆಯನ್ನು ಜುಲೈ 31ಕ್ಕೆ ಕಾಯ್ದಿರಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9985715401

Leave a Reply

Your email address will not be published. Required fields are marked *

Trending

Exit mobile version