ದಿನದ ಸುದ್ದಿ

ಜಪಾನ್ ರಾಯಭಾರಿ ಹೆಸರಲ್ಲಿ ಕಾರು ಮಾರಾಟ ಮಾಡುವುದಾಗಿ ಮೋಸ ಮಾಡಿದ ವ್ಯಕ್ತಿ..!

Published

on

ಸುದ್ದಿದಿನ ಡೆಸ್ಕ್ | ಜಪಾನ್ ರಾಯಭಾರಿ ಹೆಸರು ಮತ್ತು ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಕಾರು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆನ್ ಲೈನ್ ತಾಣದಲ್ಲಿ ವಂಚಕ ಹಾಕಿದ ಬಲೆಗೆ ಮೋಸ ಹೋದ ಜನರು, ಈ ಪೋಸ್ಟರ್ ಗಮನಿಸಿ ನಗರದ ಕಬ್ಬನ್ ರಸ್ತೆಯಲ್ಲಿ ಜಪಾನ್ ರಾಯಭಾರಿ ಕಚೇರಿಗೆ ದೌಡಾಯಿಸಿದ್ದಾರೆ. ಕಚೇರಿಗೆ ಆಗಮಿಸಿದಾಗ ಅಲ್ಲಿನ ಅಧಿಕಾರಿಗಳಿಗೇ ಶಾಕ್ ಆಗಿದೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಹಾಕಿದ್ದ ಪೋಸ್ಟರ್ ನೋಡಿ ಜನ ಮುಗಿಬಿದ್ದಿದ್ದರು.

ದಿಸ್ವೀಸ್ ಮೈ ಕಾರ್, ಸೂಪರ್ ಲುಕ್ಕಿಂಗ್, ನೋ ಸಾಚಸ್, ಟಯೋಡಾ ಇನೋವಾ ಕ್ರಿಸ್ಟ್, ಫಾರ್ ಸೇಲ್ 14 ಲಕ್ಷ ಹೀಗೆಂದು ಪೋಸ್ಟ್ ಮಾಡಿದ್ದ ವ್ಯಕ್ತಿಯು, ಕಾರು ಖರೀದಿಸಲು ಕಾಂಟ್ಯಾಕ್ಟ್ ಮಾಡಿ ಎಂದು ನಕಲಿ‌ ಮೊಬೈಲ್ ನಂಬರ್ ನೀಡಿ, ಜಪಾನ್ ರಾಯಭಾರಿ ಕಚೇರಿಯ ಮೇಲ್ ವಿಳಾಸ ಕೊಟ್ಟಿದ್ದಾನೆ. ಇದನ್ನ ನಂಬಿದ ವ್ಯಕ್ತಿಯೊಬ್ಬರ ವಂಚಕ ನೀಡಿದ ಅಕೌಂಟ್ ನಂಬರ್ ಗೆ 20 ಸಾವಿರ ಹಣವನ್ನ ವರ್ಗಾಯಿಸಿದ್ದಾರೆ. ಆತ ಕೊಟ್ಟ ಮಾಹಿತಿಯಂತೆ ಕಾರು ನೋಡಲು ರಾಯಭಾರಿ ಕಚೇರಿಗೆ ಆಗಮಿಸಿದ್ದಾರೆ. ಕೆಲ ಹೊತ್ತು ಕಾದರೂ ವಂಚಕನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ‌. ಈ ಹಿನ್ನೆಲೆ ರಾಯಭಾರಿ ಕಚೇರಿಯಲ್ಲಿ ಕೇಳಿದಾಗ ಅಧಿಕಾರಿಗಳೆ ದಂಗಾಗಿ ಜನ ಹೋಗಿದ್ದಾರೆ.
ಕೂಡಲೇ ರಾಯಭಾರಿ ಟಕಾಯುಕಿ ಕಿಟಗಾವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

takayuki kitagawa car cas

Leave a Reply

Your email address will not be published. Required fields are marked *

Trending

Exit mobile version