ದಿನದ ಸುದ್ದಿ

ಕೃಷಿ ಉತ್ಪನ್ನ ಆಮದು ತಡೆಗೆ ಕ್ರಮ; ಸಚಿವ ಬಂಡೆಪ್ಪ ಕಾಶೆಂಪುರ್ ಹೇಳಿಕೆ

Published

on

ಸುದ್ದಿದಿನ ಡೆಸ್ಕ್:  ಹೊರರಾಜ್ಯದಿಂದ ಆಮದಾಗುವ ಉತ್ಪನ್ನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರೈತ ನೇರವಾಗಿ ಮಾರಾಟ ಮಾಡಿದರೆ ಸರಿ ಆದರೆ ವರ್ತಕರು ಬೇರೆ ರಾಜ್ಯದಿಂದ ಬಂದು ಮಾರಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ತಿಳಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ಭತ್ತ ಹೆಚ್ಚಿನ ಉತ್ಪಾದನೆಯಾಗುತ್ತಿದ್ದು ಮೆಕ್ಕಜೋಳಕ್ಕೆ ರೂ.1700 ಬೆಂಬಲ ಇದೆ. ಆದರೆ ಬಿಹಾರದಿಂದ ರೂ. 1200 ಕ್ಕೆ ಮೆಕ್ಕೆಜೋಳ ಬರುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಹೊರರಾಜ್ಯದಿಂದ ರಪ್ತಾಗುವ ಪದಾರ್ಥಗಳಿಗೆ ನಿಯಂತ್ರಣಾವಿಲ್ಲವಾ ಎಂದು ಸಚಿವರು ಪ್ರಶ್ನಿಸಿದರು. ಯಾವುದೇ ರಾಜ್ಯದಿಂದ ಬರುವ ಆಹಾರಧಾನ್ಯಗಳನ್ನು ರಾಜ್ಯ ನಿರ್ಬಂಧಿಸಲು ಸಾಧ್ಯವಿಲ್ಲ ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಮೊದಲು ನಮ್ಮ ರೈತರು ಉಳಿಯಬೇಕು. ರಾಜ್ಯ ರಾಜ್ಯ ನಡುವಿನ ವ್ಯಾಪಾರದ ಕಾನೂನುಗಳು ಏನು ಹೇಳುತ್ತವೆ. ಎ.ಪಿ.ಎಂಸಿ ಕಾನೂನು ಏನು ಹೇಳುತ್ತದೆ ಎಂಬುದನ್ನು ಪರಾಮರ್ಶಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಉಣ್ಣೆ ಮಾರಾಟ ಸಹಕಾರ ಸಂಘಗಳ ಆಧುನಿಕತೆಗೆ ತಕ್ಕಂತೆ ವಸ್ತ್ರಗಳನ್ನು ವಿನ್ಯಾಸಗೊಳಿಸಬೇಕು. ನಾವು ಕೇವಲ ಹಳೇ ಕಾಲದ ಕಂಬಳಿ ನೇಯ್ದು ಕೊಂಡಿದ್ದರೆ ಸಾಲದು ಎಂದು ಕುರಿ ಉಣ್ಣೆ ಸಹಕಾರಿ ಸಂಘದ ಅಧಿಕಾರಿಗಳಿಗೆ  ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version