ಸಿನಿ ಸುದ್ದಿ

ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆ

Published

on

Photo courtesy: India Today

ಸುದ್ದಿದಿನ ಡೆಸ್ಕ್ | ಮಿಳಿನ‌ ಟಿವಿ‌‌ ಸೀರಿಯಲ್ ನಟಿ ಪ್ರಿಯಾಂಕ(32) ಪತಿಯ ಜೊತೆಗಿನ ವೈಮನಸ್ಯ ಕಾರಣ ಇಂದು (ಜುಲೈ 18) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.

ಮನೆಕೆಲಸದಾಕೆ ಇಂದು ಬೆಳಗ್ಗೆ ಮನೆಯ ಬಾಗಿಲು‌ ಎಷ್ಟು ತಟ್ಟಿದರೂ ಬಾಗಿಲು ತೆಗೆಯದ್ದಿದ್ದರಿಂದ ಗಾಬರಿಗೊಂಡು, ಪಕ್ಕದ ಕಿಟಿಕಿಯಿಂದ ನೋಡಿದಾಗ ನಟಿ ಪ್ರಿಯಾಂಕ ದೇಹ ಮನೆಯೊಳಗೆ ನೇತಾಡುತ್ತಿದ್ದುದ ಕಂಡು ಚೀರಿಕೊಂಡಾಗ ಅಕ್ಕ ಪಕ್ಕದ ಮನೆಯವರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ನಟಿ ಪ್ರಿಯಾಂಕ ಆತ್ಮಹತ್ಯೆ ಮಾಡಿಕೊಂಡ ದಿನ ಆಕೆಯ ಪತಿ ಮನೆಯಲ್ಲಿಲ್ಲದಿರುವುದು ತಿಳಿದುಬಂದಿ್ದದ್ದು, ಮಧುರೆಯಲ್ಲಿರುವ ನಟಿಯ ತಂದೆ ತಾಯಿಗೆ ವಿಷಯ ತಿಳಿಸಲಾಗಿದೆ. ಹಾಗೂ ನಟಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೋಲಿಸರು ಹೇಳಿದ್ದಾರೆ‌.

ಈ ಸಂಬಂಧ ಮೂರು ವರ್ಷಗಳ ಕಾಲ ನಟಿ ಪ್ರಿಯಾಂಕ ಸಂಸಾರನಡೆಸಿದ್ದ ನಟಿಯ ಪತಿಯನ್ನು ವಿಚಾರಣೆಗೆ ಪೋಲಿಸರು ಇಂದು ವಿಚಾರಣೆ ನಡೆಸಿದ್ದಾರೆ.

ನಟಿ ಪ್ರಿಯಾಂಕ ಹಲವು ತಮಿಳು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದರು. ‘ವಂಶಂ’ ಎಂಬ ಧಾರಾವಾಹಿ ಇವರಿಗೆ ಹೆಸರು ತಂದುಕೊಟ್ಟಿತ್ತು. ಹಾಗೇ ಇವರು ‘ಬಾಹುಬಲಿ’ ಸಿನೆಮಾದಲ್ಲಿಯೂ ಸಣ್ಣ ಪಾತ್ರ ಒಂದಲ್ಲಿ ಕಾಣಿಸಿಕೊಂಟಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version