ರಾಜಕೀಯ
ಕರುಣಾನಿಧಿ ನಿಧನ; ತಮಿಳುನಾಡಿಗೆ ಸಂಚಾರ ಬಂದ್
ಸುದ್ದಿದಿನ ಡೆಸ್ಕ್:
ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಚಾಮರಾಜ ನಗರ ಮೂಲಕ ತಮಿಳುನಾಡಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ತಮಿಳುನಾಡಿನ ಅಣ್ಣಾ ಅಸ್ತಂಗತ
ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಬಳಲುತ್ತಿದ್ದ ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ನಿಧನ ಹೊಂದಿದ್ದಾರೆ.
ಕಾವೆರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿ ಅವರ ಸಾವಿಗೆ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.
ಡಿಎಂಕೆ ನಾಯಕನ ಸಾವಿನ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹದಿನೈದು ಸಾವಿರ ಪೋಲೀಸರನ್ನು ನಿಯೊಜಿಸಲಾಗಿದೆ. ಈಗಾಗಲೆ ಕರುಣಾನಿಧಿ ಅವರ 21 ಬೆಂಬಲಿಗರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತಾಪ:
ಕರುಣಾ ನಿಧಿ ಅವರ ನಿಧನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕರುಣಾ ನಿಧಿಯವರ ನಿಧನದಿಂದಾಗಿ ನನಗೆ ತೀವ್ರ ದುಃಖ ಉಂಟಾಗಿದೆ. ಅವರು ಭಾರತದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು. ಬೇರು ಮಟ್ಟದಿಂದ ಬಂದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರು ಮಾಸ್ ಲೀಡರ್, ಚಿಂತಕ, ಅದ್ಭುತ ಲೇಖಕ ಹಾಗೂ ಬಡವರು ಮತ್ತು ಹಿಂದುಳಿದವರಿಗೆ ತನ್ನನ್ನು ಅರ್ಪಿಸಿಕೊಂಡಿದ್ದ ನಾಯಕ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಲ್ಲದೇ ಕರುಣಾನಿಧಿಯವರು ರಾಜ್ಯಗಳ ಆಕಾಂಕ್ಷೆ ಹಾಗೂ ರಾಷ್ಟ್ರದ ಏಳಿಗೆಗೆ ಬದ್ಧವಾಗಿದ್ದರು. ಅಲ್ಲದೇ ತಮಿಳುನಾಡಿನ ಅಭಿವೃದ್ಧಿ ಹಾಗೂ ತಮಿಳು ಜನರ ಧ್ವನಿಯಾಗಿ ನಿಂತಿದ್ದರು ಅಂತಾ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನಾಳೆ ತಮಿಳುನಾಡಿಗೆ ಬರುವ ನಿರಿಕ್ಷೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401