ಸಿನಿ ಸುದ್ದಿ
ತನುಶ್ರೀ ಬೆನ್ನಿಗೆ ನಿಂತ ಕೇಂದ್ರ ಸಚಿವೆ: ಲೈಂಗಿಕ ಕಿರುಕುಳದ ವಿರುದ್ಧ ಖಂಡನೆ
ಸುದ್ದಿದಿನ ಡೆಸ್ಕ್: ಬಾಲಿವುಡ್ ಕ್ಷೇತ್ರದಲ್ಲಿ ಸದ್ಯ ಲೈಂಗಿಕ ಕಿರುಕುಳದ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ. ನಟಿಯರು ತಮಗೆ ಆಗಿರುವ ಕಿರುಕುಳದ ಬಗ್ಗೆ ಬಹಿರಂಗವಾಗಿ ಖಂಡಿಸುತ್ತಿದ್ದಾರೆ.
ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ನಟ ನಾನಾ ಪಾಟೇಕರ್ ವಿರುದ್ಧ ಮಾಡಿರುವ ಕಿರುಕುಳದ ಆರೋಪ ಮಾಡಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ಕೆಲವರು ನಟಿಯ ಬೆನ್ನಿಗೆ ನಿಂತು ಮಾತನಾಡಿದ್ದಾರೆ. ಜತೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಅವರು ‘ಮೀ ಟೂ ಇಂಡಿಯಾ’ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
ಅಲ್ಲದೆ, ದೂರು ನೀಡಿದರೆ ಈ ಸಂಬಂಧ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಹಾಲಿವುಡ್ ನಲ್ಲಿ ನಡೆದಿದ್ದ ‘ಮೀ ಟೂ’ ಅಭಿಯಾನದಲ್ಲಿ ಅನೇಕ ಮಹಿಳೆಯರು ತಮ್ಮ ವಿರುದ್ಧ ನಡೆದಿದ್ದ ಲೈಂಗಿಕ ಕಿರುಕುಳದ ಕುರಿತು ಮಾತನಾಡಿದ್ದರು.