ರಾಜಕೀಯ
ಟಿಪ್ಪುಜಂಯತಿ ವೇಳೆ ನಡೆದ ಗಲಭೆಗಳಿಗೆ ಕಾರಣ ಯಾರು ಎಂದು ಬಿಜೆಪಿಯವರೇ ಹೇಳಬೇಕು : ಶಾಸಕ ತನ್ವೀರ್ ಸೇಠ್ ಕಿಡಿ
ಸುದ್ದಿದಿನ, ಬೆಂಗಳೂರು : ಟಿಪ್ಪು ಜಯಂತಿಗೆ ಬಿಜೆಪಿಯಿಂದ ವಿರೋಧ ವಿಚಾರವಾಗಿ ವಿಧಾನಸೌಧದಲ್ಲಿ ಶಾಸಕ ತನ್ವೀರ್ ಸೇಠ್ ಅವರು ಟಿಪ್ಪು ವೇಷ ಧರಿಸಿ ಖಡ್ಗವನ್ನು ಹಿಡಿದವರನ್ನು ನಾವು ಮರೆಯೋಕೆ ಸಾಧ್ಯ ಇಲ್ಲ. ಟಿಪ್ಪುವಿನ ಇತಿಹಾಸವನ್ನು ತಿರುಚುವಂತ ಕೆಲಸ ಮಾಡುವುದು ಸರಿಯಲ್ಲ. ಟಿಪ್ಪು ಒಳ್ಳೆಯ ಆಡಳಿತದ ಬಗ್ಗೆ ಸತ್ಯ ಸಂಗತಿ ತಿಳಿಯೇಬೇಕಾದ್ರೆ ಅಧ್ಯಯನ ತಂಡ ಮಾಡಲಿ. ಈ ಬಗ್ಗೆ ನನ್ನ ಮನವಿ ಇದೆ ಎಂದರು.
ಶಿಕ್ಷಣ ಕ್ಷೇತ್ರ, ಸಾರಾಯಿ ನಿಷೇಧ ಸೇರಿದಂತೆ ಟಿಪ್ಪು ಕಾಲದಲ್ಲಿ ಒಳ್ಳೆಯ ಕೆಲಸಗಳು ನಡೆದಿವೆ.ಆ ಒಳ್ಳೆಯ ಸಂಗತಿಗಳನ್ನು ಮುಂದಿಟ್ಟಕೊಂಡು ಟಿಪ್ಪು ವನ್ನು ನಾವು ಸ್ಮರಿಸಬೇಕು. ಟಿಪ್ಪು ಜಯಂತಿ ಆಚರಣೆ ವೇಳೆ ಗೊಂದಲಗಳು, ಕೊಲೆಗಳು ನಡೆದಿವೆ ಎಂದು ಬಿಜೆಪಿಯವರು ಹೇಳುತ್ತಾರೆ. ಇದನ್ನು ಮಾಡಿದವರು ಯಾರು ಎಂದು ಅವರೇ ಹೇಳಬೇಕು. ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ. ಜಾತಿ ವ್ಯವಸ್ಥೆಯ ಮೇಲೆ ಇವತ್ತು ಯಾರು ನಿಂತಿಲ್ಲ ಎಂದು ಕಿಡಿಕಾರಿದರು.
ಅದನ್ನು ಮೀರಿ ದೇಶದ ಅಭಿವೃದ್ಧಿಗಾಗಿ ನಾವೆಲ್ಲಾ ಕೆಲಸ ಮಾಡಬೇಕು. ಟಿಪ್ಪು ಜಯಂತಿ ಆಚರಣೆ ಮಾಡದಂತೆ ಟಿಪ್ಪು ವಿರೋಧಿ ಸಮಿತಿಯಿಂದ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತೆ. ಆದ್ತೆ ಸರ್ಕಾರದ ನಿರ್ಧಾರ ಬಗ್ಗೆ ನಾನು ಹೇಳುವುದಕ್ಕೆ ಆಗುವುದಿಲ್ಲ. ಸರ್ಕಾರ ಹಲವು ಮಹನೀಯರ ಜಯಂತಿ ಆಚರಣೆ ಮಾಡಿಕೊಂಡು ಬರ್ತಿದೆ.ಅದರಂತೆ ಟಿಪ್ಪು ಜಯಂತಿಯನ್ನು ಕೂಡ ಈ ಸರ್ಕಾರ ಆಚರಣೆ ಮಾಡಲಿದೆ. ಈ ಹಿಂದೆ ಸಿದ್ದರಾಮಯ್ಯ ಮಾಡಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಇವಾಗ ಮುಂದುವರೆಸುವುದಾಗಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ . ಅದರಂತೆ ಈ ಹಿಂದೆ ಆಚರಣೆ ಮಾಡಿಕೊಂಡು ಬಂದ ಟಿಪ್ಪು ಜಯಂತಿಯನ್ನು ಈ ಮೈತ್ರಿ ಸರ್ಕಾರ ಆಚರಣೆ ಮಾಡಲಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401