/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಹುಬ್ಬಳ್ಳಿಯ ಉಣಕಲ್ ನಲ್ಲಿ ನಾಳೆ ಶ್ರೀ ತರಳಬಾಳು ಜಗದ್ಗುರು ಪೂರ್ವ ಮತ್ತು ಕಿರಿಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ

Published

on

ಸುದ್ದಿದಿನ ಡೆಸ್ಕ್ : ದಿನಾಂಕ 16-12-18 ರ ಬೆಳಗ್ಗೆ 10:30ಕ್ಕೆ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ,ಶ್ರೀ ಮನ್ನಿರಂಜನ ಪ್ರಣವ ಸ್ವರೂಪಿ ಶ್ರೀ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿಗಳವರ ನೇತೃತ್ವದಿ ನಾಡಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂದೇ ಚಿರಪರಿಚಿತರಾಗಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ ಮಹಾನಗರಧ ಉಣಕಲ್ ನ ಶ್ರೀ ತರಳಬಾಳು ಜಗದ್ಗುರು ಪೂರ್ವ ಮತ್ತು ಕಿರಿಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಹಾಗೂ ಭವ್ಯವಾದ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.

ನೂತನ ಕಟ್ಟಡದ ಉದ್ಘಾಟನೆ ಶರಣ ನಾಡೋಜ ಡಾ.ಪಾಟೀಲ ಪುಟ್ಟಪ್ಪನವರಿಂದ ಜರುಗಲಿದೆ.ಮುಖ್ಯ ಅತಿಥಿಗಳಾಗಿ ಶರಣ ಎಸ್. ಎಸ್. ಪಾಟೀಲರವರು ಮಾಜಿ ಸಹಕಾರಿ ಸಚಿವರು,ಶರಣ ಎಂ ಪ್ರಹ್ಲಾದ ಜೋಶಿ ಸಂಸದರು ಹುಬ್ಬಳ್ಳಿ, ಶರಣ ಬಸವರಾಜ ಬೊಮ್ಮಾಯಿ ಮಾಜಿ ಸಚಿವರು ,ಶಾಸಕರು ಶಿಗ್ಗಾಂವಿ, ಶರಣ ಅಮೃತ ದೇಸಾಯಿ. ಶಾಸಕರು. ಧಾರವಾಡ ಗ್ರಾಮೀಣ, ಶರಣ ಪ್ರದೀಪ್ ಶೆಟ್ಟರ್ ಶಾಸಕರು ವಿಧಾನ ಪರಿಷತ್, ಸೇರಿದಂತೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು,ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version