ದಿನದ ಸುದ್ದಿ
ನಡೆದಾಡುವ ದೇವರ ಆರೋಗ್ಯ ವಿಚಾರಿಸಿದ ತರಳಬಾಳು ಶ್ರೀ
ಸುದ್ದಿದಿನ,ತುಮಕೂರು : ವಯೋಸಜ ಅನಾರೋಗ್ಯದಿಂದ ಬಳಲಿರುವ ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯವನ್ನು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಭೇಟಿ ಮಾಡಿ ವಿಚಾರಿಸಿದರು. ಈ ಸಂದರ್ಭದದಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ತಪಾಸಣೆಯ ವಿವರಗಳನ್ನು ನೀಡಿದರು. ಆಸ್ಪತ್ರೆಯ ವೈದ್ಯರು ಚಿಕಿತ್ಸೆಯ ಮಾಹಿತಿ ನೀಡಿದರು.
ಸಿದ್ಧಗಂಗಾ ಶ್ರೀಗಳದ್ದು ಗಟ್ಟಿ ಶರೀರ.ಎಲ್ಲಾ ಅಂಗಾಂಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.ಶ್ರೀಗಳು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿರುವುದಾಗಿ ಹೇಳಿದರು.ನಾವು ಶ್ರೀಗಳನ್ನು ಭೇಟಿ ಮಾಡಿದ ಸಮಯದಲ್ಲಿ ಅವರು ವಿಶ್ರಾಂತಿ ತಗೆದುಕೊಳ್ಳುತ್ತಿದ್ದರು. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಿ ಮಠಕ್ಕೆ ಮರಳಲೆಂದು ಆಶಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401